ಆದೂರು : ಕರ್ನಾಟಕ ಕೇರಳ ಗಡಿ ಪ್ರದೇಶವಾದ ದೇಲಂಬಾಡಿ ಎಂಬಲ್ಲಿ ಒಂದು ದಿನದ ನವಜಾತ ಶಿಶುವನ್ನು ಶಾಲೆಯ ಹೊರಾಂಗಣದಲ್ಲಿ ಇರಿಸಿ ನಾಪತ್ತೆಯಾಗಿದ್ದರು. ಮಗುವಿನ ಅಳು ಕೇಳಿಸಿದ ನೆರೆ ಹೊರೆಯವರು, ಆದೂರು ಠಾಣೆಗೆ ಮಾಹಿತಿ ರವಾನಿಸಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ನವಜಾತ ಶಿಶುವನ್ನು ರಕ್ಷಿಸಿ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆದೊಯ್ದು ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತತರಿಸಲಾಗಿದ್ದು, ಆದೂರು ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ. ನವಜಾತ ಶಿಶುವಿನ ರಕ್ಷಣಾ ಕಾರ್ಯವು ಆದೂರು ಠಾಣಾಧಿಕಾರಿ ವಿನೋದ್ ಕುಮಾರ್ ನೇತೃತ್ವದಲ್ಲಿ ತಂಬಾನ್, ಹರೀಶ್, ಸುನಿಲ್, ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Thursday
- April 3rd, 2025