ಅಜ್ಜಾವರ : ಸುಳ್ಯ ಮಂಡೆಕೋಲು ಅಡೂರು ಅಂತರ್ ರಾಜ್ಯ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯಮಾಲ ಎ.ಕೆ. ರವರು ಪ್ರತ್ಯೇಕವಾಗಿ ಇಬ್ಬರಿಗೆ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ಸುಳ್ಯ ಅಡೂರು ಸಂಪರ್ಕಿತ ರಸ್ತೆಯು ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು ಇಲ್ಲಿ ವಾಹನದಲ್ಲಿ ಆಗಮಿಸಿ ತ್ಯಾಜ್ಯ ಎಸೆದು ತೆರಳುತ್ತಿದ್ದರು. ಇದೀಗ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದು ಈ ಪೈಕಿ ಸುಳ್ಯದ ತಾಲೂಕು ಕಛೇರಿ ಬಳಿಯಲ್ಲಿ ಕಾರ್ಯನಿರ್ವಹಿಸುವ ಹೋಟೆಲ್ ಉದ್ಯಮಿಯ ಪುತ್ರ ಪಯಸ್ವಿನಿ ನದಿಗೆ ತ್ಯಾಜ್ಯವನ್ನು ಎಸೆದಾಗ ಅವರನ್ನು ಊರಿನ ಯುವಕರು ಹಿಡಿದು ಪೊಲೀಸ್ ಮತ್ತು ಪಂಚಾಯತ್ ಗಮನಕ್ಕೆ ತಂದು ಇದೀಗ ಅವರಿಗೆ ಹತ್ತು ಸಾವಿರ ರೂಪಾಯಿಗಳನ್ನು ದಂಡ ವಿಧಿಸಿದ್ದಾರೆ. ಅಲ್ಲದೆ ನಿನ್ನೆ ಇನ್ನೊಂದು ಕಡೆಯಲ್ಲಿ ಸುಳ್ಯದ ಹಳೆಗೇಟು ಬಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆದು ತೆರಳಿದ್ದರು ಈ ತ್ಯಾಜ್ಯ ಎಸೆದ ವ್ಯಕ್ತಿಗು ಹತ್ತು ಸಾವಿರ ದಂಡ ವಿಧಿಸಲಾಗಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಈ ನಡೆಗೆ ಗ್ರಾಮದಲ್ಲಿ ವ್ಯಾಪಕ ಪ್ರಂಸಂಶೆ ವ್ಯಕ್ತವಾಗಿದೆ.