Ad Widget

ಸಂಪಾಜೆ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

ಸಂಪಾಜೆ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭವು ಜು.07  ರಂದು ಜ್ಯೂನಿಯರ್ ಕಾಲೇಜ್ ಸಂಪಾಜೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲೆ 317ಡಿಯ 2ನೇ ಉಪರಾಜ್ಯಪಾಲರಾದ ಲಯನ್ ಹೆಚ್ ಎಮ್ ತಾರಾನಾಥ ರವರು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಾಂತೀಯ ಅಧ್ಯಕ್ಷರಾದ ಲಯನ್ ಗಂಗಾಧರ ರೈ, ವಲಯ ಅಧ್ಯಕ್ಷರಾದ ಲಯನ್ ರೂಪಶ್ರೀ ರೈ, ನಿರ್ಗಮಿತ ಅಧ್ಯಕ್ಷರಾದ ಲಯನ್ ಯೋಗೇಶ್ವರ ಎಸ್, ನೂತನ ಅಧ್ಯಕ್ಷರಾದ ಲಯನ್ ಪಾರ್ವತಿ ಎಮ್, ಕಾರ್ಯದರ್ಶಿ ಲಯನ್ ಗಿರೀಶ್ ಕೆ ವಿ, ಕೋಶಾಧಿಕಾರಿ ಲಯನ್ ಶುಭಾ ರವೀಂದ್ರ ಹಾಗೂ ಚಾರ್ಟರ್ ಸದಸ್ಯರಾದ ಲಯನ್ ಸಚಿತ್ ಕುಮಾರ್ ರೈ ಮತ್ತು ಲಯನ್ ನವೀನ್‌ಚಂದ್ರರವರು ಉಪಸ್ಥಿತರಿದ್ದರು.
ಸುಳ್ಯ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು. ಲಯನ್ ಯೋಗೇಶ್ವರರವರು ಎಲ್ಲರನ್ನು ಸ್ವಾಗತಿಸಿದರೆ, ವಂದನಾರ್ಪಣೆಯನ್ನು ಲಯನ್ ಗಿರೀಶ್ ಕೆ ವಿ ಹಾಗೂ ಕಾರ್ಯಕ್ರಮವನ್ನು ಲಯನ್ ಲೋಕ್ಯಾನಾಯ್ಕ ರವರು ನಿರೂಪಿಸಿದರು. ಲಯನ್ ಕಿಶೋರ್ ಕುಮಾರ್ ಕೆಕೆ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading