- Wednesday
- April 2nd, 2025

ಕಲ್ಲುಗುಂಡಿ ಕೂಲಿಶೆಡ್ ಬಳಿ ಕಾರು ಪಲ್ಟಿಯಾದ ಘಟನೆ ಸಂಜೆ ನಡೆದಿದೆ. ಸುಳ್ಯ ಕಡೆಯಿಂದ ಮಡಿಕೇರಿಗೆ ಹೋಗುವ ವೇಳೆ ಕಾರು ಕಲ್ಲುಗುಂಡಿ ಕೂಲಿಶೆಡ್ ಬಳಿ ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಬಿಜೆಪಿ ಶಾಸಕರಾಗಿರುವ ಡಾ. ಭರತ್ ಶೆಟ್ಟಿಯವರು, ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಕುರಿತು ನೀಡಿದ ಹೇಳಿಕೆ ಖಂಡನೀಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯ ರಂಜಿತ್ ರೈ ಮೇನಾಲ ಹೇಳಿದ್ದಾರೆ.ಸಂಸತ್ತಿನೊಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸುತೇನೆ ಎಂಬ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿ ಇರುವ ಯಾರೇ ಆಗಲಿ ಈ...

ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ವಾಸು ಎಂಬವರ ಪತ್ನಿ ಕುಸುಮಾವತಿ(45) ಮನೆ ಸಮೀಪದಲ್ಲಿದ್ದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ. ಮೃತರು, ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಹೂವಪ್ಪ ಗೌಡ ಕಂಚುಗಾರಗದ್ದೆ ಅವರು ಕೆಲವು ಸಮಯಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದು, ಜುಲೈ 08 ರಂದು ರಾತ್ರಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು.ಮೃತರಿಗೆ 59 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಕೊಲ್ಲಮೊಗ್ರು ಕಟ್ಟ ಗೋವಿಂದನಗರದ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ, ಮಕ್ಕಳಾದ ಪ್ರಜ್ವಲ್, ವೈಶಾಲಿ ಹಾಗೂ...

ಸಂಪಾಜೆ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭವು ಜು.07 ರಂದು ಜ್ಯೂನಿಯರ್ ಕಾಲೇಜ್ ಸಂಪಾಜೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಜಿಲ್ಲೆ 317ಡಿಯ 2ನೇ ಉಪರಾಜ್ಯಪಾಲರಾದ ಲಯನ್ ಹೆಚ್ ಎಮ್ ತಾರಾನಾಥ ರವರು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪ್ರಾಂತೀಯ ಅಧ್ಯಕ್ಷರಾದ ಲಯನ್ ಗಂಗಾಧರ ರೈ, ವಲಯ ಅಧ್ಯಕ್ಷರಾದ ಲಯನ್ ರೂಪಶ್ರೀ ರೈ, ನಿರ್ಗಮಿತ...