- Thursday
- April 3rd, 2025

ಸೇತುವೆಯಿಂದ ನದಿಗೆ ಹಾರಿದ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುಳಿಕುಕ್ಕು ಸೇತುವೆಯಲ್ಲಿ ಇಂದು ನಡೆದಿದೆ. ಪುಳಿಕುಕ್ಕು ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ಇರುವುದನ್ನು ಸ್ಥಳೀಯರು ನೋಡಿ, ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಯುವಕನನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಅರಂತೋಡು ಗ್ರಾಮದ ಅಡ್ತಲೆ ಸ.ಹಿ.ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಜು.07 ರಂದು ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಾಡಲಾಯಿತು. ಸಂಘದ ಅಧ್ಯಕ್ಷರಾಗಿ ಭವಾನಿಶಂಕರ ಅಡ್ತಲೆ, ಉಪಾಧ್ಯಕ್ಷರಾಗಿ ಡಿಲ್ಲಿಕುಮಾರ್ ಕಾಯರ, ಕಾರ್ಯದರ್ಶಿಯಾಗಿ ಸಂತೋಷ್ ಪಿಂಡಿಮನೆ, ಜತೆ ಕಾರ್ಯದರ್ಶಿ ಯಾಗಿ ಶಶಿಕುಮಾರ್ ಉಳುವಾರು, ಕೋಶಾಧಿಕಾರಿಯಾಗಿ ಗಿರೀಶ್ ಅಡ್ಕ, ಗೌರವ ಅಧ್ಯಕ್ಷರಾಗಿ ಮೋಹನ್ ಅಡ್ತಲೆ ಹಾಗೂ...