ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕುರುಂಜಿಬಾಗ್, ಸುಳ್ಯ , ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ (ರಿ.) ಮಂಗಳೂರು, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಚಳ್ಳ, ಗುತ್ತಿಗಾರು, ಮಡಪ್ಪಾಡಿ ಗ್ರಾಮ ಪಂಚಾಯತ್ ಹಾಗೂ ನಾಲ್ಕು ಗ್ರಾಮಗಳ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜು.10 ರಂದು ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.
ಶಿಬಿರದ ಉದ್ಘಾಟನೆಯನ್ನು ಡಾ. ನಂದಕುಮಾರ್ ತಾಲೂಕು ಆರೋಗ್ಯಾಧಿಕಾರಿಗಳು, ಸುಳ್ಯ ಇವರು ನೆರವೇರಿಸಲಿದ್ದಾರೆ.
ಡಾ. ಮಹೇಶ್ ಬಾಬು ಪ್ರೊಪೆಸರ್ ಕಣ್ಣಿನ ವಿಭಾಗ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರು ಉಪಸ್ಥಿತರಿರಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಮಿತ್ರಾ ಮೂಕಮಲೆ ಅಧ್ಯಕ್ಷರು ಗ್ರಾಮ ಪಂಚಾಯತ್ ಗುತ್ತಿಗಾರು, ಶೈಲೇಶ್ ಅಂಬೆಕಲ್ಲು ಅಧ್ಯಕ್ಷರು, ಗ್ರಾಮ ಪಂಚಾಯತ್ ದೇವಚಳ್ಳ, ಶ್ರೀಮತಿ ಉಷಾ ಜಯರಾಮ್ ಅಧ್ಯಕ್ಷರು ಗ್ರಾಮ ಪಂಚಾಯತ್ ಮಡಪ್ಪಾಡಿ ಇವರು ಉಪಸ್ಥಿತರಿರಲಿದ್ದಾರೆ.