ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಬೆಂಗಳೂರು (ರಿ ) ಇದರ ರಾಜ್ಯ ಉಪಾಧ್ಯಕ್ಷರಾಗಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ, ಚಿತ್ರ ನಿರ್ದೇಶಕ, ಗಾಯಕರಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ (ಗೊಂಧಳಿ) ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಪ್ರಕಾಶ್ ಎಂ ಮತ್ತು ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರುಗಳು ಬೆಂಗಳೂರಿನ ಗಾಂಧಿ ಭವನದಲ್ಲಿ ಜರುಗಿದ ಪ್ರವರ್ಗ ಒಂದರ ಜನಾಂಗಗಳ ವರ್ಷದ ಮಹಾಸಭೆಯಲ್ಲಿ ಗಣ್ಯರ ಸಮಾಕ್ಷಮ ರಾಜ್ಯ ಉಪಾಧ್ಯಕ್ಷ ಅಂತ ನೇಮಕ ಮಾಡಿ ಆದೇಶ ಪತ್ರ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರವರ್ಗ 1 ರ 46 ಜನಾಂಗಗಳ ಗುರು ಹಿರಿಯರು ಉಪಸ್ಥಿತರಿದ್ದರು. ನೇಮಕ ಆದೇಶ ಪತ್ರದ ಜೊತೆ ಗುರುತಿನ ಚೀಟಿ ನೀಡಿ ಶುಭ ಹಾರೈಸಿದ್ದಾರೆ.
- Tuesday
- December 3rd, 2024