ಪುತ್ತೂರು ವಿಭಾಗೀಯ ವಿಭಾಗದ ಪೌಷ್ಟಿಕ ಪುನರ್ ವಸತಿ ಕೇಂದ್ರಕ್ಕೆ ಎಸಿ ಧಿಡೀರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಕೇಂದ್ರವು ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕು ಕೇಂದ್ರಗಳಿಗೆ ಹೊಂದಿಸಿಕೊಂಡು. ಈ ಕೇಂದ್ರವಾಗಿದ್ದು, ಇಲ್ಲಿ ೨೦೨೪ ರಲ್ಲಿ ಸುಮಾರು ೧೫ ಮಂದಿ ಅಪೌಷ್ಟಿಕತೆಯಿಂದ ಬಳಳುತ್ತಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕತೆಯನ್ನು ಹೆಚ್ಚಿಸುವ ಸಲುವಾಗಿ ಸೇರ್ಪಡೆಗೊಳಿಸಿ ತಾಯಿಯು ಮಗುವಿಗೆ ನೀಡಬೇಕಾದ ಪೌಷ್ಟಿಕ ಅಹಾರ ಕ್ರಮಗಳ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ತಾಲೂಕು ವೈಧ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಆರೋಗ್ಯ ಕೇಂದ್ರ ಆಡಳಿತ ವೈಧ್ಯಾಧಿಕಾರಿ ಕರುಣಾಕರ ಕೆ. ವಿ., ತಾಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶೈಲಜಾ ಮತ್ತು ತಜ್ಞ ವೈಧ್ಯಾಧಿಕಾರಿಗಳು, ಶುಶ್ರೂಕಿಯರು ಉಪಸ್ಥಿತರಿದ್ದರು.
- Thursday
- November 21st, 2024