Ad Widget

ಎ.ಸಿ. ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಭೆ


ನಗರದಲ್ಲಿ ಅಗಲೀಕರಣ ಅಥವಾ ಬೈಪಾಸ್ ರಸ್ತೆ ನಿರ್ಮಾಣ ಮಾಡಿ ಸದಸ್ಯರ ಒತ್ತಾಯ

ರಸ್ತೆ , ಫುಟ್ ಪಾತ್,  ಕುರುಂಜಿಗುಡ್ಡೆ ಪಾರ್ಕ್ ಬಗ್ಗೆ ಪ್ರಸ್ತಾಪ ಸ್ಥಳದಲ್ಲಿಯೇ ಕೆಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸಿದ ಎ ಸಿ

   ಸುಳ್ಯ, ಜು.4: ಸುಳ್ಯ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ನಗರದಲ್ಲಿ ರಸ್ತೆ ಅಗಲೀಕರಣ ಅಥವಾ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸುವಂತೆ ಪ್ರಸ್ತಾಪಿಸಿದ ಘಟನೆ ಸುಳ್ಯ ನಗರ ಪಂಚಾಯತ್ ಸಭೆಯಲ್ಲಿ ಗುರುವಾರ ನಡೆಯಿತು.
    ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ, ಸುಳ್ಯ ನಗರದಲ್ಲಿ ಸಮರ್ಪಕ ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲ. ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವವರು ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ರಸ್ತೆಯಲ್ಲೇ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದಕ್ಕಾಗಿ ನಗರದಲ್ಲಿ ರಸ್ತೆ ಅಗಲೀಕರಣ ಅಥವಾ ನಗರಕ್ಕೆ ಬೈಪಾಸ್ ರಸ್ತೆ ಮಾಡುವಂತೆ ಅವರು ಪ್ರಸ್ತಾಪಿಸಿದರು. ಈ ಬಗ್ಗೆ ಮಾತನಾಡಿದ ಎಸಿ ಜುಬಿನ್ ಮೊಹಪಾತ್ರ, ನಗರದಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಬಹುದಾದ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ಮಾಹಿತಿ ಪಡೆಯುತ್ತೇನೆ. ಟ್ರಾಫಿಕ್ ನಿಯಂತ್ರಿಸಲು ವರದಿ ಪಡೆದು ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇನೆ ಎಂದರು. ಸುಳ್ಯಕ್ಕೆ ಟ್ರಾಫಿಕ್ ಪೊಲೀಸ್ ಠಾಣೆಗೆ ಒತ್ತಾಯಿಸಿದ ಘಟನೆಯೂ ನಡೆಯಿತು.

   ನಗರದ ಘನತ್ಯಾಜ್ಯ ನಿರ್ವಹಣೆಗೆ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ 10 ತಾರೀಖಿನೊಳಗೆ ಒಂದು ಹಂತದ ಮಾಹಿತಿ ಸಿಗಲಿದೆ. ಕಾನೂನು ಪಾಲನೆಯೊಂದಿಗೆ ಜಾಗ ಪಡೆದು ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುತ್ತೇವೆ. ಬೇರೆ ಎಲ್ಲಿಯಾದರು ಪೂರಕ ಜಾಗ ಇದ್ದಲ್ಲಿ ತಿಳಿಸುವಂತೆಯೂ ಎಸಿ ತಿಳಿಸಿದರು.

ದುರಸ್ತಿಗೆ ಕ್ರಮ:
   ನಗರದ ರಸ್ತೆಯಲ್ಲಿ ಹೊಂಡ-ಗುಂಡಿ, ಚರಂಡಿ ಸ್ಲ್ಯಾಬ್ ಗಳು ಸಮರ್ಪಕವಾಗಿ ಇಲ್ಲದೇ ಇರುವ ಬಗ್ಗೆ ಸಭೆಯಲ್ಲಿ ಸದಸ್ಯರು ದೂರಿದರು. ಈ ಬಗ್ಗೆ ಮಾತನಾಡಿದ ಎಸಿ, ಎನ್.ಎಚ್. ಅಧಕಾರಿಗಳಿಗೆ ಮಾಹಿತಿ ನೀಡಿ ಅವರಿಂದ ದುರಸ್ತಿ ಕಾರ್ಯ ಮಾಡಿಸಲು ಸೂಚಿಸಲಾಗುವುದು ಎಂದರು.

ಸಿಬ್ಬಂಗಳು ಜನಪ್ರತಿನಿಧಿಗಳ ಮತ್ತು ನಾಗರಿಕರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳಿ
ಸಿಬ್ಬಂದಿಗಳ ಬಗ್ಗೆ ದೂರು ವ್ಯಕ್ತವಾದ ಬಗ್ಗೆ ಮಾತನಾಡಿದ ಎಸಿ, ಸಿಬ್ಬಂದಿಗಳು ಸಾರ್ಬಜನಿಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಗೌರವಯುತವಾಗಿ ವರ್ತಿಸಿ ಅಲ್ಲದೇ ನಿಮ್ಮಿಂದಾಗಿ ಅಧಿಕಾರಿಗಳಿಗೆ ಒಳ್ಳೆಯ ಹೆಸರು ಬರಬೇಕು ಎಂದರು. ಜನಪ್ರತಿನಿಧಿಗಳೊಂದಿಗೆ  ಸೇರಿ ಸಲಹೆ ಸೂಚನೆ ನೀಡಿ ಎಂದರು. ಯಾವುದೇ ಕಾರಣಕ್ಕೂ ಸಿಬ್ಬಂದಿಗಳ ವರ್ತನೆ ಬಗ್ಗೆ ದೂರು ಬರದಂತೆ ಎಚ್ಚರಿಕೆಯಿಂದರಬೇಕು ಅಲ್ಲದೇ ಮುಖ್ಯಾಧಿಕಾರಿ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು .

ನಗರದಲ್ಲಿ ನಿವೇಶನ ರಹಿತರ ಸಮಸ್ಯೆ ಇದೆ. ಬೇಡಿಕೆ ಇದ್ದರೂ ಸಮರ್ಪಕ ಜಾಗದ ಕೊರತೆಯಿಂದ ನಿವೇಶನ ರಹಿತರಿಗೆ ಇನ್ನೂ ಜಾಗ ನೀಡಲಾಗಿಲ್ಲ ಎಂದು ಸದಸ್ಯರು ಪ್ರಸ್ತಾಪಿಸಿದರು. ನಗರದಲ್ಲಿ ಶೇ ೪೦ ರಷ್ಟು ಅಕ್ರಮ ಕಟ್ಟಡಗಳು ಇರುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾವಾಯಿತು. ನಿವೇಶನಾ ರಹಿತರಿಗೆ ಜಾಗ ನೀಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು.

ರಸ್ತೆಯಲ್ಲೇ ವಿದ್ಯುತ್ ಕಂಬ ಹಾಕಿದ್ದರೆ, ಅಪಾಯಕಾರಿ ಮರಗಳು ಇದ್ದಲ್ಲಿ ಪಟ್ಟಿ ನೀಡಿ ಸಂಬಂಧಿಸಿದವರಿಗೆ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಸಿ ತಿಳಿಸಿದರು. ಬೀರಮಂಗಲದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನೀಡಿದ ಜಾಗವನ್ನು ರದ್ದು ಮಾಡಿರುವುದನ್ನು ಮತ್ತೆ ನೊಇಡುವಂತೆ, ನಗರ ಮಹಾಯೋಜನೆ ನಿಯಮ ಸುಳ್ಯಕ್ಕೆ ಹೊಂದಿಕೊಳ್ಳುವಂತೆ ಸಡಿಲ ಮಾಡುವಂತೆ, ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ಸಮರ್ಪಕವಾಗಿ ನೊರ್ವಹಿಸುವಂತೆ, ಪುರಭವನ ದುಸ್ತರ ಸ್ಥಿತಿಯಲ್ಲಿ ಇರುವ ಬಗ್ಗೆ, ಕುರುಂಜಿಗುಡ್ಡರ ಪಾರ್ಕ್ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದಿರುವ ಬಗ್ಗೆ, ಪಯಸ್ವಿನಿ ನದಿಯಲ್ಲಿ ಬೋಟ್ ವ್ಯವಸ್ಥೆ ಮಾಡಿ ಪ್ರವಾಸಿ ತಾಣ ಮಾಡುವಂತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು.

ಎಸಿ  ಜುಬಿನ್ ಮೊಹಪಾತ್ರ ಸಭೆಯಲ್ಲಿ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಸ್ಥಳೀಯವಾದ ಕೆಲವೊಂದು ಸಮಸ್ಯೆಗಳನ್ನು ತಾವುಗಳು ಚರ್ಚಿಸಿ ಪರಿಹರಿಸಬೇಕು ಅಲ್ಲದೇ ಕುರುಂಜಿ ಗುಡ್ಡೆ ಪಾರ್ಕ್ ವಿಚಾರದಲ್ಲಿ ಇಂತಿಷ್ಟು ಟಿಕೆಟ್ ದರ ನಿಗದಿ ಪಡಿಸಿ ಅದರಿಂದಲೇ ಅದರ ನಿರ್ವಾಹಣೆ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು ಈ ಸಭೆಯಲ್ಲಿ ನಗರ ಪಂಚಾಯತ್ ಆಡಳಿತಾಧಿಕಾರಿ ಮಂಜುನಾಥ್ ಜಿ., ಕೃಷಿ ಇಲಾಖೆಯ ಗುರುಪ್ರಸಾದ್, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ನ.ಪಂ. ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!