ಸುಳ್ಯ: ನ.ಪಂ. ಸಭೆಯಲ್ಲಿ ನಗರ ಪಂಚಾಯತ್ ಗುತ್ತಿಗೆ ಆಧಾರದ ನೌಕರರು ಮಹಿಳಾ ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಾರೆ. ನಮಗೆ ಯಾವುದೇ ತರಹದ ಮಾಹಿತಿಯನ್ನು ಮತ್ತು ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಸದಸ್ಯರು ದೂರಿಕೊಂಡ ಹಿನ್ನಲೆಯಲ್ಲಿ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸಿ, ಅಧಿಕಾರಿಗಳ ಹೆಸರುಗಳನ್ನು ಕೇಳಿ ಅವರವರ ಕರ್ತವ್ಯಗಳ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಕೆಲಸಗಳಿಂದ ನಗರ ಪಂಚಾಯತ್ ಗೆ ಉತ್ತಮ ರೀತಿಯ ಹೆಸರು ಮತ್ತು ಅಧಿಕಾರಿಗಳಿಗೆ ಉತ್ತಮ ಹೆಸರು ಬರಬೇಕು, ಮುಂದಿನ ಸಭೆಗೆ ಬರುವ ಸಂದರ್ಭದಲ್ಲಿ ಈ ಸಮಸ್ಯೆ ನನ್ನ ಮುಂದೆ ಬರಬಾರದು. ಅದನ್ನು ನೀವುಗಳು ಸರಿಪಡಿಸಿಕೊಳ್ಳಬೇಕು ಅದನ್ನು ಮುಖ್ಯಾಧಿಕಾರಿ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ತೆರಿಗೆ ಸಂಗ್ರಹಣೆಗೆ ಸ್ಕಾನರ್ ಬಳಸಿ :
ಟ್ಯಾಕ್ಸ್ ಕಲೆಕ್ಷನ್ ಮತ್ತು ಎಲ್ಲಾ ರೀತಿಯ ತೆರಿಗೆಗಳನ್ನು ಶೇಖರಿಸಲು ನಗರ ಪಂಚಾಯತ್ ಸ್ಕಾನರ್ ಬಳಸಿ ಸರಕಾರದ ನಿಮ್ಮ ಬಳಿಗೆ ಆಡಳಿತ ವ್ಯವಸ್ಥೆ ಎಂಬುದನ್ನು ಮಾಡಬೇಕು. ಅಲ್ಲದೇ ತೆರಿಗೆಯ ಮಾಹಿತಿಗಳನ್ನು ತೆರಿಗೆದಾರರಿಗೆ ನೀವು ವ್ಯಾಟ್ಸಪ್ ಮೂಲಕ ಕಳಿಸಿಕೊಟ್ಟು ಅದರ ಮುಖೇನ ಸ್ಕಾನರ್ ನೀಡಿ ತಕ್ಷಣವೇ ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹೇಳಿದರು. ಕುಡಿಯುವ ನೀರಿನ ಸಮಸ್ಯೆಗಳನ್ನು ಕೂಡ ಸೂಕ್ತ ರೀತಿಯಲ್ಲಿ ವಿಲೇ ಗೊಳಿಸಬೇಕು ಎಂದು ನೌಕರರಿಗೆ ಎಸಿ ಸೂಚಿಸಿದರು.
- Thursday
- November 21st, 2024