
ಶಾರ್ಜಾದ ಅಮೇರಿಕನ್ ಯುನಿವರ್ಸಿಟಿಯಲ್ಲಿ ಸ್ವಿಮ್ಮಿಂಗ್ ಮತ್ತು ಬಿಡಬ್ಲೂö್ಯಎಫ್ ಬ್ಯಾಡ್‌ಮಿಂಟನ್ ಕೋಚ್ ಆಗಿರುವ ಕುಕ್ಕೆ ಸುಬ್ರಹ್ಮಣ್ಯದ ರಾಜಾ ಸುಬ್ರಹ್ಮಣ್ಯ ಅವರಿಗೆ ಬೆಸ್ಟ್ ಅಂಪ್ಲಾಯಿ ಆಫ್ ದಿ ಈಯರ್ ೨೦೨೪ ಪುರಸ್ಕಾರ ಲಭಿಸಿದೆ.ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಮೇರಿಕನ್ ಯುನಿವರ್ಸಿಟಿಯ ಆಡಳಿತ ಮಂಡಳಿ ಅಧ್ಯಕ್ಷರು ಪುರಸ್ಕಾರ ಪ್ರಧಾನ ಮಾಡಿದರು. ತನ್ನ ೨೫ ವರ್ಷದ ಸೇವೆಯಲ್ಲಿ ೩ನೇ ಬಾರಿಗೆ ಈ ಪುರಸ್ಕಾರ ಪಡೆದಿದ್ದಾರೆ.
ಇದಲ್ಲದೆ ಕಳೆದ ೨೫ ವರ್ಷಗಳಿಂದ ಅಮೇರಿಕನ್ ಯುನಿವರ್ಸಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ೨೫ನೇ ವರ್ಷದ ಸೇವಾ ಪುರಸ್ಕಾರವೂ ಲಭಿಸಿದೆ. ಅಲ್ಲದೆ ಇವರು ಅಂತರಾಷ್ಟೀಯ ಮಟ್ಟದ ಬ್ಯಾಡ್‌ಮಿಂಟನ್ ರೆಫ್ರಿಯಾಗಿದ್ದಾರೆ. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಇವರು ಸುಬ್ರಹ್ಮಣ್ಯದ ಅಣ್ಣೋಜಿರಾವ್ ಮತ್ತು ಸೀತಮ್ಮ ದಂಪತಿಗಳ ಪುತ್ರ. ಪತ್ರಕರ್ತ ರತ್ನಾಕರ ಸುಬ್ರಹ್ಮಣ್ಯ ಅವರ ಸಹೋದರ.
