Ad Widget

ಸುಳ್ಯ ನಗರದಲ್ಲಿ ಟ್ರಾಫಿಕ್ ಕುರಿತು ರಿಕ್ಷಾ ಚಾಲಕರ ಜೊತೆಗೆ ಪೊಲೀಸ್ ಅಧಿಕಾರಿಗಳ ಸಭೆ



ಸುಳ್ಯ: ಸುಳ್ಯ ನಗರದಲ್ಲಿ ವಾಹನ ದಟ್ಟನೆ ಹೆಚ್ಚಿದ್ದು ಪದೇ ಪದೇ ಟ್ರಾಫಿಕ್ ಸಮಸ್ಯೆಗಳು ಉಲ್ಬಣಿಸಿ ರಸ್ತೆ ಸಂಚಾರದಲ್ಲಿ ಗೊಂದಲ ಮತ್ತು ಟ್ರಾಫಿಕ್ ಜಾಮ್ ತಪ್ಪಿಸುವ ಮತ್ತು ಮುಂಜಾಗ್ರತೆ ಕುರಿತ ಸಭೆಯು ಸುಳ್ಯ ಠಾಣಾಧಿಕಾರಿ ಸರಸ್ವತಿ ಯವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಅಟೋ ಚಾಲಕರಿಗೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರಲ್ಲದೆ ರಾತ್ರಿಯಲ್ಲಿ ಸಂಚಾರ ವೇಳೆಗೆ ಪ್ರಯಾಣಿಕರ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಅಲ್ಲದೇ ರಿಕ್ಷಾಗಳಲ್ಲಿ ಓವರ್ ಲೋಡ್ ಜನರನ್ನು ತುಂಬುವಂತಿಲ್ಲ ಎಂದು ಸೂಚಿಸಿದರು . ಕೆಲ ಆಟೋ ಚಾಲಕರು ಸಮವಸ್ತ್ರ ಧರಿಸದೇ ಇರುವುದು ಕಂಡುಬರುತ್ತಿದ್ದು ಸಮವಸ್ತ್ರ ಕಡ್ಡಾಯವಾಗಿ ಧರಿಸತಕ್ಕದ್ದು ಮತ್ತು ಅಟೋ ರಿಕ್ಷಾಗಳ ದಾಖಲೆ ಪತ್ರಗಳು ತಮ್ಮಲ್ಲಿ ಇರಬೇಕು. ಅಲ್ಲದೇ ರಿಕ್ಷಾಗಳಲ್ಲಿ ಮಕ್ಕಳನ್ನು ಕರೆದೊಯ್ಯುವವರು ಮಕ್ಕಳ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಳ್ಯ ಕ್ರೈಂ ಪಿ ಎಸ್ ಐ ಸರಸ್ವತಿಯವರು ತಿಳಿಸದರು. ಈ ಸಂದರ್ಭದಲ್ಲಿ ಸುಳ್ಯ ನಗರದ ಆಟೋ ಚಾಲಕ ಮಾಲಕರು ಮತ್ತು ಪೋಲಿಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!