Ad Widget

ಲಕ್ಷಾಂತರ ರೂಪಾಯಿಗಳಲ್ಲಿ ನಿರ್ಮಿಸಿದ ಕುರುಂಜಿ ಗುಡ್ಡೆ ಪಾರ್ಕ್ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಾಡು – ನಿರ್ವಹಣೆ ಜವಬ್ದಾರಿ ಯಾರಿಗೆ ಉತ್ತರಿಸುವಿರಾ ?




ಸುಳ್ಯ: ಸುಳ್ಯ ನಗರದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿದ್ದ ಕುರುಂಜಿಗುಡ್ಡೆ ಪಾರ್ಕ್ ಇದೀಗ ನಿರ್ವಾಹಣೆ ಮಾಡದೇ ಇದ್ದು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಇಡೀ ಸುಳ್ಯದ ನಾಗರೀಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಪ್ರಕೃತಿಯ ರಮಣೀಯತೆ, ತೋಟಗಳ ಸೌಂದರ್ಯ ರಾಶಿ ಜತೆಗೆ ನಗರದ ವಿಹಂಗಮ ನೋಟ ಹೊಂದಿರುವ ಸುಳ್ಯ ನಗರದ ಅತೀ ಎತ್ತರದ ಪ್ರದೇಶದಲ್ಲಿ ಕುರುಂಜಿಗುಡ್ಡೆ ಎಂಬಲ್ಲಿ ನಗರ ಪಂಚಾಯತ್ ಕೆಲ ವರ್ಷಗಳ ಹಿಂದೆ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದರು.

ನಗರದ ಜನತೆ ವಿಶ್ರಾಂತಿ, ಪ್ರಕೃತಿ ಸೌಂದರ್ಯ ಪಡೆಯಲು ನಾಲ್ಕು ಹೆಜ್ಜೆ ನಡೆದಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಇಲ್ಲಿನ ಜನತೆಯನ್ನು ಕಾಡಿತ್ತು. ಹಲವು ವರ್ಷಗಳ ಯೋಜನೆ ಬಳಿಕ ಚೊಕ್ಕದಾದ ಉದ್ಯಾನವೊಂದು ಕುರುಂಜಿಗುಡ್ಡೆಯ ನೆತ್ತಿಯಲ್ಲಿ ತಲೆ ಎತ್ತಿತ್ತು. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಅಲ್ಲಿ ಮರ ಗಿಡಗಳನ್ನು ನೆಟ್ಟು ಬೆಳೆಸಲಾಗಿದ್ದು ಹುಲ್ಲು ಹಾಸು ಹಾಕಲಾಗಿತ್ತು. ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಬೆಂಚ್ ಗಳನ್ನು ನಿರ್ಮಿಸಲಾಗಿದೆ. ವಾಕಿಂಗ್ ಗೆ ಅನುಕೂಲವಾಗುವಂತೆ ಇಂಟರ್ ಲಾಕ್ ಅಳವಡಿಸಲಾಗಿದೆ. ಆದರೆ ವರ್ಷಗಳು ಉರುಳಿದಂತೆ ಸುಳ್ಯ ನಗರ ಪಂಚಾಯತ್‌ ಅದರ ನಿರ್ವಹಣೆ ಮಾಡದೇ ಕೈ ಚೆಲ್ಲಿ ಕುಳಿತಿದೆ.

ಸದ್ಯದಲ್ಲಿ ಪಾರ್ಕ್ ಅಕ್ರಮ ಚಟುವಟಿಕೆಗಳ ತಾಣ ?

ಕುರುಂಜಿಗುಡ್ಡೆಯ ಪಾರ್ಕ್ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದ್ದು ಹಣ ಕೊಟ್ಟು ತಂದು ನೆಡಲಾಗಿರುವ ಗಿಡಗಳ ಮೈಂಟೆನೆನ್ಸ್ ಮಾಡದೇ ಕಾಡು ಬಳ್ಳಿಗಳು ಸುತ್ತಿಕೊಂಡಿವೆ. ಪಾರ್ಕ್ ನ ಹುಲ್ಲು ಹಾಸಿನಲ್ಲಿ ಕಾಡುಗಿಡಗಳು ಬೆಳೆದಿದೆ. ನಗರದ ಅಡಳಿತ ಸ್ವಚ್ಚತೆಯೇ ಧೈಯ ಎಂದು ಹೇಳುತ್ತಿದೆಯಾದರೂ ಇಲ್ಲಿ ಮಾತ್ರ ಅದನ್ನು ಪಾಲಿಸುತ್ತಿಲ್ಲ.

ಪಾರ್ಟಿಗಳ ತಾಣ : ಕುರುಂಜಿಗುಡ್ಡೆ ಇಂದು ಪಾರ್ಟಿಗಳ ತಾಣವಾಗಿದೆಯೇ ಎಂದೆನಿಸುವಂತಿದೆ. ಗಿಡಗಳ ಮಧ್ಯೆ ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದುಕೊಂಡಿದೆ. ಬರ್ತ್ ಡೇ ಪಾರ್ಟಿ ಮಾಡಿ ಕೇಕ್ಳ ಪ್ಯಾಕೆಟ್ ಗಳು ಎಸೆಯಲಾಗಿದೆ. ಪ್ಲಾಸ್ಟಿಕ್, ಕಸಗಳು ಎಲ್ಲವೂ ಚೆಲ್ಲಾಡಿದಂತಿದೆ ತಾಲೂಕು ಕೇಂದ್ರ, ಗ್ರಾಮ ಕೇಂದ್ರಗಳಿರಲಿ ಊರಿಗೊಂದು ಪಾರ್ಕ್‌ ಮಾಡಿದರೆ ಅದಕ್ಕೆ ನಿಯಮವನ್ನು ಅಳವಡಿಸಬೇಕಾಗುತ್ತದೆ. ಆದರೆ ಕುರುಂಜಿಗುಡ್ಡೆಯಲ್ಲಿ ನಿಯಮ ಪಾಲನೆ ಮಾಡಿಲ್ಲ. ಅನುದಾನ ವ್ಯಯಿಸಿದ್ದಾರೆ. ಎಷ್ಟು ಗಂಟೆಗೆ ಬರಬೇಕು..ಎಷ್ಟು ಗಂಟೆ ತನಕ ಇರಬೇಕು ಎಂಬ ನಿಯಮವಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳಗ್ಗೆ ಬಂದರೆ ಸಂಜೆ ತನಕ ಇರುತ್ತಾರೆ. ರಾತ್ರಿಯಲ್ಲಿಯೂ ಜನರು ಬಂದು ಇಲ್ಲಿ ಬರುತ್ತಾರೆ. ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು ಇನ್ನಾದರೂ ಜನರ ಬೇಡಿಕೆಯಂತೆ ಸುಳ್ಯದ ನಗರಾಡಳಿತ ಪಾರ್ಕ್ ಗೆ ವ್ಯವಸ್ಥಿತ ಬೇಲಿ ರಚನೆಯೊಂದಿಗೆ ಪಾರ್ಕ್ ನಿರ್ವಹಣೆ ಮಾಡುವುದೋ ಎಂದು ಕಾದು ನೋಡಬೇಕಾಗಿದೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!