ಪೈಕ ಶ್ರೀ ಶಿರಾಡಿ ದೈವಸ್ಥಾನದ ಎದುರುಗಡೆ ಬೃಹತ್ ಕಿನ್ನಿಗೋಳಿ ಮರ ಬಿದ್ದು ಸಾರ್ವಜನಿಕ ದಾರಿಗೆ ತೊಂದರೆಯಾಗಿತ್ತು. ದಾರಿಗೆ ಬಿದ್ದ ಮರದ ಗೆಲ್ಲು ಬಿದ್ದ ಗೆಲ್ಲುಗಳನ್ನು ಗುತ್ತಿಗಾರು ಶೌರ್ಯ ವಿಪತ್ತು ಘಟಕದ ಸದಸ್ಯರು ತೆರವುಗೊಳಿಸಿದರು. ಈ ಶ್ರಮದಾನದಲ್ಲಿ ಶೌರ್ಯ ವಿಪತ್ತು ಘಟಕದ ಸಂಯೋಜಕರಾದ ಲೋಕೇಶ್ವರ ಡಿ ಆರ್, ಸದಸ್ಯರುಗಳಾದ ಪಿ ಜಯರಾಮ, ಅಚ್ಯುತ ಗುತ್ತಿಗಾರು, ಸತೀಶ್ ಮೂಕಮಲೆ, ಮಾಧವ ಎರ್ದಡ್ಕ, ರಾಕೇಶ್ ಮೆಟ್ಟಿನಡ್ಕ, ಓಂಕಾರ ಡಿ.ಆರ್. ಅಚ್ಚುತ ಪೈಕ, ಜಯಪ್ರಕಾಶ್ ಬಾಕಿಲ, ದೀಕ್ಷಿತ್ ಎನ್ ಎಲ್ ಭಾಗವಹಿಸಿದ್ದರು.
- Tuesday
- December 3rd, 2024