ಕುಕ್ಕೆ ಸುಬ್ರಹ್ಮಣ್ಯ :ಜು.1,ಜುಲೈ ಒಂದು ಪತ್ರಿಕಾ ದಿನಾಚರಣೆ ಈ ವಿಶೇಷ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಈಗಿನ ಅಧ್ಯಕ್ಷರಾದ ವಿಶ್ವನಾಥ್ ನಡುತೋಟ ಅವರು ನಾಡಿನ ಸಮಸ್ತ ದೃಶ್ಯ, ಡಿಜಿಟಲ್ ಹಾಗೂ ಪತ್ರಿಕಾವೃತ್ತಿಬಾಂಧವರಿಗೆ ಶುಭಾಶಯ ಹೇಳಿದ್ದಾರೆ.
ಪತ್ರಿಕೆ,ದೃಶ್ಯ ಮಾಧ್ಯಮಗಳು ಜನಸಾಮಾನ್ಯರಿಗೆ ಸಹಕಾರಿಯಾಗಿರಬೇಕು, ಯಾವುದೇ ವರದಿ ಮಾಡುವ ಸಂದರ್ಭದಲ್ಲಿ ಸತ್ಯತೆಯನ್ನ ಅರಿತು ನಿಷ್ಪಕ್ಷಪಾತ ವರದಿ ಮಾಡಬೇಕು, ನಾವೆಲ್ಲ ಮಾಧ್ಯಮದವರು ಭಾರತ ಸಂವಿಧಾನದ ಒಂದು ಭಾಗ, ನಮ್ಮ ದೇಶದ ಕಾನೂನನ್ನು ಅರಿತುಕೊಂಡು ಕಾನೂನಾತ್ಮಕವಾಗಿ ವರದಿಯನ್ನ ಪ್ರಸಾರ ಮಾಡಬೇಕು, ನಾವು ಮಾಡುವ ವರದಿಯಿಂದ ಜನಸಾಮಾನ್ಯರಿಗೆ ಅನುಕೂಲತೆಗಳಾಗಬೇಕು ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗಬಾರದು ಇಂದಿನ ಈ ವಿಶೇಷ ದಿನಾಚರಣೆ ಸಂದರ್ಭ ಎಲ್ಲಾ ಪತ್ರಿಕೆ ಮಿತ್ರರಿಗೆ ಶುಭಾಶಯವನ್ನು ಸಲ್ಲಿಸುತ್ತೇನೆ ಎಂದರು.
- Wednesday
- December 4th, 2024