ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಪದಗ್ರಹಣ ಸಮಾರಂಭ ಹಾಗೂ ಚಾರ್ಟರ್ ನೈಟ್ ಸಮಾರಂಭವು ಜು.01 ರಂದು ಏನೆಕಲ್ ನ ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ದ್ವಿತೀಯ ಉಪ ರಾಜ್ಯಪಾಲ ಹೆಚ್. ಎಂ. ತಾರಾನಾಥ್ ಪದಗ್ರಹಣ ನೆರವೇರಿಸಿಕೊಟ್ಟರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಪೂರ್ವ ರಾಜ್ಯಪಾಲ ಎಂ.ಬಿ. ಸದಾಶಿವ ನಡೆಸಿಕೊಟ್ಟರು.
ವೇದಿಕೆಯಲ್ಲಿ ಸ್ಥಾಪಕ ಹಾಗೂ ವಲಯ ಅಧ್ಯಕ್ಷ ಪ್ರೊ.ಕೆ. ರಂಗಯ್ಯ ಶೆಟ್ಟಿಗಾರ್, ಪ್ರಾಂತೀಯ ಅಧ್ಯಕ್ಷ ದಯಾನಂದ ರೈ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ ರಾಜೇಶ್ ಎನ್ ಎಸ್, ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಕೋಶಾಧಿಕಾರಿ ಮೋಹನ್ ದಾಸ್ ರೈ ವೇದಿಕೆಯಲ್ಲಿದ್ದು ಅಧಿಕಾರ ಸ್ವೀಕರಿಸಿದರು. ಹಾಗೂ ರಾಜೇಶ್ ದಂಪತಿ ದೀಪ ಪ್ರಜ್ವಲನ ಮಾಡಿದರು. ಪದಾಧಿಕಾರಿಗಳಿಗೆ ಉಪರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಮಚಂದ್ರ ಪಳಂಗಾಯ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಕಾರ್ಯದರ್ಶಿ ಸತೀಶ ಕುಜುಗೋಡು, ಖಜಾಂಜಿ ಚಂದ್ರಶೇಖರ ಪಾನತ್ತಿಲ ವೇದಿಕೆಯಲ್ಲಿದ್ದರು. ನೂತನ ಸದಸ್ಯರುಗಳಾಗಿ ಲೊಕೇಶ ಬಳ್ಳಡ್ಕ ಹಾಗೂ ದೀಪಕ್ ನಂಬಿಯಾರ್ ಅವರನ್ನು ಬರಮಾಡಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮರ್ದಾಳದ ಬೆತನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳಿಗೆ ಶಾಲೆಯ ಮಧ್ಯಾಹ್ನದ ಭೋಜನದ ಅನ್ನದಾನಕ್ಕೆ ರೂ.10,000 ಧನಸಹಾಯ ಹಸ್ತಾಂತರಿಸಲಾಯಿತು. ದೇವರ ಹಳ್ಳಿ ಸ.ಕಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ ಕೊಡುಗೆಯಾಗಿ ರೂ 5,000 ಮೊತ್ತವನ್ನ ನೀಡಲಾಯಿತು. ಕುಮಾರಸ್ವಾಮಿ ವಿದ್ಯಾಲಯದ ಮತ್ತು ಎಸ್. ಎಸ್. ಪಿ.ಯು. ವಿದ್ಯಾ ಸಂಸ್ಥೆಯ ಎಸ್. ಎಸ್. ಎಲ್. ಸಿ. ಮತ್ತು ಪಿ. ಯು . ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಮಲ ರಂಗಯ್ಯ, ಭಾರತಿ ದಿನೇಶ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ಕೃಷ್ಣ ಕುಮಾರ ಬಾಳುಗೋಡು ವಂದಿಸಿದರು.