ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ತರ್ತೀಲ್(ಕುರ್ಆನ್) ಸ್ಪರ್ಧೆಯು
ದಿನಾಂಕ 30-06-2024 ಆದಿತ್ಯವಾರದಂದು ಸುಳ್ಯ ಸ್ಟೂಡೆಂಟ್ಸ್ ಸೆಂಟರ್ ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಸಿದ್ದೀಕ್ ಹಿಮಮಿ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ಡಿವಿಷನ್ ನ 4 ಸೆಕ್ಟರ್ ಗಳ 20 ರಷ್ಟು ಯೂನಿಟ್ ಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಅಂಕಪಟ್ಟಿಯಲ್ಲಿ ಸುಳ್ಯ ಸೆಕ್ಟರ್ ಪ್ರಥಮ ಹಾಗೂ ಬೆಳ್ಳಾರೆ ಸೆಕ್ಟರ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ನಾಯಕರಾದ ಲತೀಫ್ ಸಖಾಫಿ ಗೂನಡ್ಕ, ಸಿದ್ದೀಕ್ ಕಟ್ಟೆಕಾರ್, ಸಿದ್ದೀಕ್ ಗೂನಡ್ಕ ಹಾಗೂ ಡಿವಿಷನ್ ನಾಯಕರು ಉಪಸ್ಥಿತರಿದ್ದರು. ಡಿವಿಷನ್ ಸಿ ಸಿ ಕಾರ್ಯದರ್ಶಿ ರಿಯಾನ್ ಸಅದಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳರವರು ವಂದಿಸಿದರು.
ರಾಷ್ಟ್ರಮಟ್ಟದ ಸ್ಪರ್ಧೆಯು ಜುಲೈ 27, 28 ರಂದು ದೆಹಲಿಯಲ್ಲಿ ನಡೆಯಲಿದ್ದು ಪ್ರಥಮ 51,000 ದ್ವಿತೀಯ 31,000 ಹಾಗೂ ತೃತೀಯ 11,000 ನಗದು ಬಹುಮಾನ ಘೋಷಿಸಲಾಗಿದೆ.