ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಮರ್ಕಂಜದ ಜಗದೀಶ ರೈ ಪಟ್ಟೆ ಇವರ ಗದ್ದೆಯಲ್ಲಿ ಜೂ .29 ರಂದು ಕೆಸರುಗದ್ದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಆರಂಭಿಸಲಾಯಿತು. ಬಳಿಕ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ವೇದಿಕೆಯಲ್ಲಿದ್ದ ಗಣ್ಯರಾದ ಜಗದೀಶ ರೈ ಪಟ್ಟೆ , ಇಂಚರ ಪಡ್ಡಂಬೈಲು , ಹರೀಶ್ ಕಂಜಿಪಿಲಿ, ಗಂಗಾಧರ ಪಿ. ಎಸ್ , ಸಂತೋಷ್ ಕುತ್ತ ಮುಟ್ಟೆ ದೀಪವನ್ನು ಬೆಳಗಿಸಿ, ಹಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಊರಿನ ಹಿರಿಯರಾದ ಬಾಲಕೃಷ್ಣ ರೈ ಹಾಡನ್ನು ಹೇಳುತ್ತಾ, ಉಳಿದವರು ಅವರ ಹಾಡನ್ನು ಅನುಕರಿಸುತ್ತಾ ಗದ್ದೆಗೆ ಇಳಿದು ನಾಟಿ ಮಾಡುವುದು ಹೇಗೆ ಎಂಬುದಾಗಿ ತಿಳಿಸಿ ಕೊಟ್ಟರು .
ಬಳಿಕ 10ನೇ ತರಗತಿಯ ಪುನರ್ವಿ ‘ ಕೆಸರುಗದ್ದೆಯಲ್ಲಿ ಆಟವಾಡುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ‘ ಎಂಬ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಸಿದಳು.ಬಳಿಕ ಮಕ್ಕಳ ಸಂತೋಷಕ್ಕೆ ಗದ್ದೆಯನ್ನು ಕಲ್ಪಿಸಿಕೊಟ್ಟ ಜಗದೀಶ ರೈ ಪಟ್ಟೆ ಮತ್ತು ಸಿಜು ಸಿ ಎಸ್ ರವರಿಗೆ ಗೌರವಾರ್ಪಣೆಯನ್ನು ಮಾಡಲಾಯಿತು.ಬಳಿಕ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂಚರ ಪಡ್ಡಂಬೈಲ್ ‘ ನಾನು ಕೆವಿಜಿ ಐಪಿಎಸ್ ನ ಮೊದಲ ಬ್ಯಾಚಿನ ವಿದ್ಯಾರ್ಥಿನಿಯಾಗಿದ್ದು, ಈ ಕಾರ್ಯಕ್ರಮಕ್ಕೆ ಬರಲು ತುಂಬಾ ಸಂತೋಷದಿಂದಿದ್ದೆ. ವಿದ್ಯಾರ್ಥಿಗಳ ಆರೋಗ್ಯ ಬೆಳವಣಿಗೆಗೆ ಕೆಸರು ಗದ್ದೆ ಆ ಟ ಒಂದು ಉತ್ತಮ ಆಟ ಎಂದು ‘ ಹೇಳಿದರು. ಬಳಿಕ ಇಂಚರ ಪಡ್ಡಂಬೈಲ್, ಹರೀಶ್ ಕಂಜಿಪಿಲಿ ಗಂಗಾಧರ್ ಪಿ ಎನ್ ಮತ್ತು ಸಂತೋಷ್ ಕುತ್ತ ಮುಟ್ಟೆಯವರಿಗೆ ಸ್ಮರಣಿಕೆಯನಿತ್ತು ಗೌರವಿಸಲಾಯಿತು. ಆಮೇಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಸುಗ್ಗಿ ಹಾಡು ನೃತ್ಯವನ್ನು ಮಾಡಿ ಮನರಂಜಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಹಲವಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .ಈ ಕಾರ್ಯಕ್ರಮವನ್ನು ಹತ್ತನೇ ತರಗತಿಯ ಅನೀಶ್ ಮತ್ತು ಸಾನ್ವಿ ನಿರೂಪಿಸಿದರು. ಸೋನಾ ನಾರ್ಕೋಡು ಸ್ವಾಗತಿಸಿ ಧ್ರುವ ವಂದಿಸಿದನು. ಈ ದಿನದ ಭೋಜನದ ವ್ಯವಸ್ಥೆಯನ್ನು ಜಗದೀಶ್ ರೈ ಪಟ್ಟೆ, ಸಿಜು ಸಿ ಎಸ್ ಮತ್ತು ಹರೀಶ ಕಾಂಜಿಪಿಲಿ ರವರು ವಹಿಸಿಕೊಂಡರು.ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು, ಊರಿನ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.