- Wednesday
- April 2nd, 2025
ಶಬ್ದದ ಮೂಲವೇನು ಗೊತ್ತೆ ಹಾಗಿದ್ದರೆ ಈ ಕೆಳಗಿನ ವೀಡಿಯೋ ವೀಕ್ಷಿಸಿ. https://youtube.com/shorts/OAVV12Wg1Es?si=xt4hfvlvTOULsMWo ದುಗಲಡ್ಕ ಸಮೀಪ ನೀರಬಿದಿರೆ ಪರಿಸರದಲ್ಲಿ ಇಂದು ರಾತ್ರಿ ಸುಮಾರು 8.30 ಕ್ಕೆ ಭೂಮಿ ಅಡಿಯಿಂದ ಗುಡುಗಿನಂತಹ ಶಬ್ದ ಹಲವರಿಗೆ ಕೇಳಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಹಲವರು ಅನುಭವ ಹಂಚಿಕೊಳ್ಳುತ್ತಿದ್ದುಈ ಬಗ್ಗೆ ದುಗಲಡ್ಕ ಮತ್ತು ನೀರಬಿದರೆ ಮೂಲದಲ್ಲಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಹೊಳೆ ನದಿಗಳು ತುಂಬಿ ಹರಿಯುತ್ತಿದ್ದು ದಿನಾಂಕ 01-08-2024 ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ದಿನಾಂಕ 01-08-2024 ರಂದು ರಜೆಯನ್ನು ದ.ಕ.ಜಿಲ್ಲಾಧಿಕಾರಿಗಳು...

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅಡುಗೆದಾರರಾಗಿ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟ್ರಮಣ ಬೇರ್ಪಡ್ಕರವರು ಜು.31ರಂದು ನಿವೃತ್ತಿ ಹೊಂದಿದ್ದು,ಅವರಿಗೆ ಅಭಿನಂದನಾ ಸಮಾರಂಭ ಸುಳ್ಯ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ತಾಲೂಕು ಆಸ್ಪತ್ರೆಯಲ್ಲಿ ನಡೆದ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಡಾ. ಪದ್ಮನಾಭ ಎಂ ಕೆ ವಹಿಸಿದ್ದರು. ಸಭಾ ವೇದಿಕೆಯಲ್ಲಿ ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಾ.ಅರ್ಚನಾ...

ಮಂಡೆಕೋಲು ಗ್ರಂಥಾಲಯದಲ್ಲಿ ಆಷಾಢದಲ್ಲಿ ಅಕ್ಕಂದಿರ ಹರಟೆ ಚಟುವಟಿಕೆ ಸರಳ ರೀತಿಯಲ್ಲಿ ಆಚರಿಸಲಾಯಿತು. ಈ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಲತಾ ಸದಾನಂದ ಮಾವಜಿಯವರು ವೆಂಕಟ್ರಮಣ ಸೊಸೈಟಿ ನಿರ್ದೇಶಕರು , ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರತಿಮಾ ಹೆಬ್ಬಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಪಿ, ಗ್ರಾಮ ಪಂಚಾಯತ್ ಸದಸ್ಯರಾದ ಬಾಲಚಂದ್ರ ಡಿಸಿ , ಉಷಾಗಂಗಾಧರ ಮಾವಂಜಿ...

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಅಡುಗೆದಾರರಾಗಿ 36 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವೆಂಕಟ್ರಮಣ ಬೇರ್ಪಡ್ಕರವರು ಜು.31 ರಂದು ನಿವೃತ್ತಿ ಹೊಂದಲಿದ್ದಾರೆ. 1988 ಮಾರ್ಚ್ 21 ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿದ್ದರು ಬಳಿಕ 1996 ರಿಂದ ಹುದ್ದೆ ಖಾಯಮಾತಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿ 2016 ಸೆಪ್ಟೆಂಬರ್‌ನಿಂದ ಸರಕಾರಿ ನೌಕರನಾಗಿ ಪರಿಗಣಿತರಾಗಿದ್ದರು. ಇದೀಗ 60 ವರ್ಷ...

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದ ತಿಮ್ಮಪ್ಪಯ್ಯರ ಪುತ್ರ ಸುಳ್ಯದಲ್ಲಿ ವಕೀಲರಾಗಿದ್ದ ಸುಧೀರ್ ಭಟ್ ರವರು ಅಸೌಖ್ಯದಿಂದ ಜು.31 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಂದೆ, ತಾಯಿ ಶ್ರೀಮತಿ ಸಾವಿತ್ರಿ, ಪತ್ನಿ ಶ್ರೀಮತಿ ಶ್ವೇತಾ, ಮಕ್ಕಳಾದ ಶ್ರೀ, ಶ್ರೀ ದುರ್ಗ, ಶ್ರೀ ತನಯ ಮತ್ತು ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಸುಳ್ಯ – ಕೊಯನಾಡು ಮಾರ್ಗವಾಗಿ ಹೊರಡಬೇಕಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ನಿಲ್ದಾಣದಲ್ಲೇ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ.ಬಸ್ ನಲ್ಲಿದ್ದವರನ್ನು ತಕ್ಷಣ ಕೆಳಗೆ ಇಳಿಸಲಾಯಿತು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು.

ಪ್ರತಿಯೊಬ್ಬ ಮನುಷ್ಯನಿಗೂ ತಾನು ಸುಂದರವಾಗಿ ಕಾಣಬೇಕು ಎನ್ನುವುದು ಸಹಜ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೆಚ್ಚು ಅನಿವಾರ್ಯ ಎಂದು ತಿಳಿದಿದ್ದರೂ, ಜನರು ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಮನುಷ್ಯನ ಸಹಜವಾದ ಮತ್ತು ಪ್ರಾಮಾಣಿಕವಾದ ಅನಿಸಿಕೆ. ಇದು ಖಂಡಿತವಾಗಿಯೂ ತಪ್ಪಲ್ಲ. ಬಾಹ್ಯ ಸೌಂದರ್ಯಕ್ಕೂ ಮನೋಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಮನುಷ್ಯನಿಗೆ ತಾನು...

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜು.31 ಮತ್ತು ಆ. 01ರಂದು ಭಾರತೀಯ ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಕೆಲವು ರಸ್ತೆ ಸಂಪರ್ಕಗಳು ಅಲ್ಲಲ್ಲಿ ಕಡಿತಗೊಂಡಿದ್ದು, ಜು.31 ಮತ್ತು ಆ. 01ರಂದು ಜಿಲ್ಲೆಗೆ ಭೇಟಿ ನೀಡಲು ಇಚ್ಛಿಸಿರುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುರಕ್ಷತೆಯ ಹಿತದೃಷ್ಟಿಯಿಂದ ಮುಂದೂಡುವಂತೆ ಕೊಡಗು...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ನಾಳೆ 31-07-2024 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು,...

All posts loaded
No more posts