Ad Widget

ಪಂಜ : 15 ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ

ಶ್ರೀ ಶಾರದಾಂಬ ಭಜನಾ ಮಂಡಳಿ  ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಸುಳ್ಯ ತಾಲೂಕು,  ಪಂಜ ಮತ್ತು ನಿಂತಿಕಲ್ಲು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 15ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ ಮೇ.5 ರಂದು ನಡೆಯಿತು.ಪಾಲ್ತಿಮಾರ್ ಶ್ರೀ ಮೂಕಾಂಬಿಕ ಕ್ಷೇತ್ರದ...

ಸುಳ್ಯ : ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಹೂತು ಹೋದ ಲಾರಿ

ಸುಳ್ಯದ ಎಪಿಎಂಸಿ ಎದುರು ಭಾಗದಲ್ಲಿ ಪೈಪ್ ಲೈನ್ ಕಾಮಗಾರಿ ನಡೆದ ಜಾಗದಲ್ಲಿ ಲಾರಿಯೊಂದು ಹೂತು ಹೋದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬಳಿಕ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಇನ್ನೂ ಮಳೆ ಆರಂಭವಾದಾಗ ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಘನ ವಾಹನ ಚಾಲಕ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು...
Ad Widget

ಪ್ರಗತಿ ಸ್ಟಡಿ ಸೆಂಟರ್‌ನ ಐದು ವಿದ್ಯಾರ್ಥಿನಿಯರು ಮೊಂಟೆಸರಿ ಶಿಕ್ಷಕಿಯಾಗಿ ಆಯ್ಕೆ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಂಟೆಸರಿ ಶಿಕ್ಷಕಿ ತರಬೇತಿಯ ೫ ವಿದ್ಯಾರ್ಥಿನಿಯರು ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ. ಮಾಡಾವು ನಿವಾಸಿಯಾದ ಶ್ರೀ ವಿಶ್ವನಾಥ ಮೊಗೇರ ಹಾಗೂ ಬೇಬಿ ದಂಪತಿಗಳ ಪುತ್ರಿಯಾದ ಶ್ರಾವ್ಯ ಇವರು ಮತ್ತು ಪುತ್ತೂರಿನ ದರ್ಬೆ ನಿವಾಸಿಯಾದ ಬಿ. ಜಗದೀಶ್ ಆಚಾರ್ಯ ಮತ್ತು ಶ್ರೀಮತಿ ಸರಿತಾ ದಂಪತಿಗಳ ಪುತ್ರಿಯಾದ ನಿಹಾರಿಕ ಇವರು ಶ್ರೀ ರಾಮಕೃಷ್ಣ ಸೇವಾ...

ಉಬರಡ್ಕ: ಕುತ್ತಮೊಟ್ಟೆಯಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ.

ಉಬರಡ್ಕ: ಉಬರಡ್ಕ ಕುತ್ತಮೊಟ್ಟೆ ಸೂರ್ಯ ಮನೆ ಎಂಬಲ್ಲಿ ಬೈ ಹುಲ್ಲು ಸಾಗಾಟದ ಪಿಕಪ್ ಗೆ ಬೆಂಕಿ ತಗುಲಿದ ಘಟನೆ ಇದೀಗ ವರದಿಯಾಗಿದೆ . ಘಟನೆ ನಡೆದ ಸ್ಥಳಕ್ಕೆ ಇದೀಗ ಅಗ್ನಿಶಾಮಕ ದಳವು ತೆರಳಿದ್ದು ಪಿಕಪ್ ಗೆ ಹೊತ್ತಿದ ಬೆಂಕಿಯನ್ನು ನಂದಿಸಲಾಗಿದೆ , ಯಾವ ರೀತಿಯಲ್ಲಿ ಬೆಂಕಿ ಹೊತ್ತಿಕೊಂಡಿತು ಎಂಬುವುದರ ಮಾಹಿತಿ ಇನ್ನಷ್ಟೆ ಬರಬೇಕಿದ್ದು ಈ ಕುರಿತ...

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನವೈಭವದಿಂದ ಜರುಗಿದ ಮಹಾವಿಷ್ಣುಮೂರ್ತಿ ದೈವದ ನಡಾವಳಿ.

ಸುಳ್ಯ: ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನಿವಾರ ನಡೆದ ವೈಭವದ ಮಹಾವಿಷ್ಣುಮೂರ್ತಿ ದೈವದ ನಡಾವಳಿಯೊಂದಿಗೆ ಮೂರು ದಿನಗಳ ಜಾತ್ರೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಜಾತ್ರೋತ್ಸವದ ಕೊನೆಯ ದಿನವಾದ ಶನಿವಾರ ದೇಗುಲದ ಬಡಗು ದಿಕ್ಕಿನಲ್ಲಿರುವ ವಿಷ್ಣುಮೂರ್ತಿ ದೈವದ ಕಟ್ಟೆಯ ಸನಿಹ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಿತು. ಈ ವೇಳೆ ಅಸಂಖ್ಯಾತ ಭಕ್ತಾದಿಗಳು ಹಾಜರಿದ್ದು ದೈವದ ಪ್ರಸಾದ ಸ್ವೀಕರಿಸಿದರು....

ಎನ್ನೆಂಸಿ; ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ.

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಜೀವ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಮೇ 03 ಶುಕ್ರವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗ ಆಯೋಜಿಸಿದ "ವರ್ಟೆಕ್ಸ್ 6.0" ರಾಷ್ಟ್ರ ಮಟ್ಟದ ಅಂತರ ಕಾಲೇಜು ವಿಜ್ಞಾನ ಉತ್ಸವದಲ್ಲಿ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನ ಶಾಸ್ತ್ರ...

ಸಂಪಾಜೆ – ಕಲ್ಲುಗುಂಡಿ ಗಾಳಿ ಮಳೆಗೆ  ವಿವಿಧೆಡೆ ಹಾನಿ

ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿದ ಘಟನೆ ಸಂಪಾಜೆ - ಕಲ್ಲುಗುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ.ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ...

ನಿರಂತರವಾಗಿ ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ನಗರ ಪಂಚಾಯತ್. ಕಟ್ಟೆ ಬಳಿಯಲ್ಲಿ ಕಾಮಗಾರಿ ಆರಂಭ.

ಸುಳ್ಯ: ಸುಳ್ಯ ನಗರದ ಹೆಬ್ಬಾಗಿಲು ಸುಳ್ಯ ಮಾಣಿ ಮೈಸೂರು ರಸ್ತೆಯ ಚೆನ್ನಕೇಶವ ದೇವರು ರಥಬೀದಿಗೆ ಆಗಮಿಸಿದ ಸಂದರ್ಭದಲ್ಲಿ ಕುಳಿತುಕೊಳ್ಳುವ ಕಟ್ಟೆಯ ಬಳಿಯಲ್ಲಿ ನಿರಂತರವಾಗಿ ನೀರು ಹೊರ ಬರುತ್ತಿದ್ದು ವಾಹನ ಸವಾರರಿಗೆ ಕಿರಿ ಉಂಟಾಗುತ್ತಿತ್ತು ಇದನ್ನು ಸುಳ್ಯ ಸೇರಿದಂತೆ ರಾಜ್ಯದ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದು ಇದೀಗ ಎಲ್ಲಾ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ತುರ್ತಾಗಿ ಕಾಮಗಾರಿ...

ಉಬರಡ್ಕ : ಸಹಕಾರಿ ಸಂಘದ ನೂತನ ಸಿರಿ ಸಹಕಾರ ಸೌಧ ಲೋಕಾರ್ಪಣೆ

ಉಬರಡ್ಕ ಮಿತ್ತೂರು ಪ್ರಾ.ಕೃ. ಪ.ಸ.ಸಂಘದ ನೂತನ ಕಟ್ಟಡ ಸಿರಿ ಸಹಕಾರ ಸೌಧ ಇಂದು ಲೋಕಾರ್ಪಣೆಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ಲೋಕಾರ್ಪಣೆಗೊಳಿಸಿದರು. ಗೋದಾಮು ಕಟ್ಟಡವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಎಸ್.ಅಂಗಾರ  ಉದ್ಘಾಟಿಸಿದರು.ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು. ಈ ಸಂದರ್ಭದಲ್ಲಿ  ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ...

ಸುಳ್ಯದ ಶ್ರೀ ರಾಮ ವೆಜೀಟೇಬಲ್ಸ್ ಮುಂಭಾಗ ಕಾರು-ರಿಕ್ಷಾ-ಬೈಕ್ ನಡುವೆ ಪರಸ್ಪರ ಡಿಕ್ಕಿ, ಬೈಕ್ ಸವಾರನ ಕಾಲಿಗೆ ಗಾಯ

ಸುಳ್ಯ: ಶ್ರೀರಾಮ ವೆಜಿಟೇಬಲ್ಸ್ ಮುಂಭಾಗದಲ್ಲಿ  ಕಾರು ರಿಕ್ಷಾ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರನ ಕಾಲಿನ ಬೆರಳುಗಳಿಗೆ ಗಾಯಗಳಾದ ಘಟನೆ ವರದಿಯಾಗಿದೆ.ಕಲ್ಲುಮುಟ್ಟು ನಿವಾಸಿ ದಿಲೀಪ್ ಎಂಬಾತ ಸುಳ್ಯ ಕಡೆಗೆ ಬರುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಕಾರು ಮತ್ತು ರಿಕ್ಷಾ ಪರಸ್ಪರ ಡಿಕ್ಕಿ ಹೊಡೆಯಿತು.ಪರಿಣಾಮ ಬೈಕ್‌ ಸವಾರನ ಕಾಲಿನ ಮೂರು ಬೆರಳುಗಳು ತುಂಡಾಗಿದ್ದುಗಾಯಾಳುವನ್ನು...
Loading posts...

All posts loaded

No more posts

error: Content is protected !!