- Saturday
- April 19th, 2025

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79ವ) ಮೇ 8ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಇತ್ತೀಚೆಗೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಕೊನೆಯುಸಿರೆಳೆದಿದ್ದು, ಮೇ 9ರಂದು ಮುಂಜಾನೆ ಪಾರ್ಥಿವ...

1967ರಲ್ಲಿ ನಡೆದ ಅಖಿಲ ಭಾರತ ಜನಸಂಘದ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ, ಸಮಾವೇಶ ಯಶಸ್ವಿಗೊಳಿಸಿದ ಮಹಾ ನಾಯಕ - ನಾ ಸೀತರಾಮ್. ಸುಳ್ಯದ ಸಾಮಾಜಿಕ – ಧಾರ್ಮಿಕ ಹಾಗೂ ರಾಜಕೀಯ ಮುಖಂಡರುಗಳಿಂದ ನುಡಿನಮನ ಸಲ್ಲಿಕೆ ಸುಳ್ಯದ ಹಿರಿಯ ಬಿಜೆಪಿ ಮುಖಂಡ, ಹಿರಿಯ ಉದ್ಯಮಿ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಸಾರ್ವಜನಿಕ...

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2023-24ನೇ ಎಸ್‌ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದ್ದಾರೆ. ನಾಳೆ 10.30 ಕ್ಕೆ ವೆಬ್‌ಸೈಟ್ ಮೂಲಕವು ಫಲಿತಾಂಶವನ್ನು ವೀಕ್ಷಿಸಬಹುದು.

ಲೋಕಾಯುಕ್ತದ ವತಿಯಿಂದ ಜನ ಸಂಪರ್ಕ ಸಭೆಯು ಮೇ. 07 ರಂದು ಸುಳ್ಯ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಿತು.ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ. ಕುಮಾರ್, ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಅಮಾನುಲ್ಲಾ ಖಾನ್, ಸುರೇಶ್ ಬಾಬು ಸಹಿತ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.ಸುಳ್ಯ ತಹಶೀಲ್ದಾರ್ ಜಿ. ಮಂಜುನಾಥ್, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್,...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳಿಂದ ಕುಮಾರಧಾರ ಸ್ನಾನ ಘಟ್ಟ ಸ್ವಚ್ಚತೆ ಕಾರ್ಯ ಮೇ. 7 ರಂದು ಕೈಗೊಂಡರು. ಭಕ್ತಾಧಿಗಳು ನದಿಯಲ್ಲಿ ಬಿಟ್ಟು ಹೋಗಿರುವ, ರಾಶಿ ರಾಶಿ ಬಟ್ಟೆ ಸಂಗ್ರಹಿಸಲಾಯಿತು. ಬಳಿಕ ಅದನ್ನು ವಿಲೇವಾರಿ ಮಾಡಲಾಯಿತು. ದೇವಾಲಯದ ಹೆಚ್ಚಿನ ಎಲ್ಲಾ ಸಿಬ್ಬಂದಿ ಈ ಒಂದು ಕೆಲಸದಲ್ಲಿ ಪಾಲ್ಗೊಂಡರು.

ರಬ್ಬರ್ ಪ್ರಾದೇಶಿಕ (ಬೋರ್ಡ್) ಮಂಡಲಿ ಮತ್ತು ರಬ್ಬರ್ ಬೆಳೆಗಾರರ ಸಂಘ, ಐವರ್ನಾಡು ಇದರ ಸಹಯೋಗದೊಂದಿಗೆ ಮೇ.7 ರಂದು ಜಾಲ್ಸೂರು ಗ್ರಾಮದ ಸೋಣಂಗೇರಿ ಸಮೀಪದ ಗೋಂಟಡ್ಕ ಪ್ರಕಾಶ್ ರೈ ದೇರ್ಲರವರ ರಬ್ಬರ್ ತೋಟದಲ್ಲಿ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮ ಜರುಗಿತು. ರಬ್ಬರ್ ಬೆಳೆಗಾರರ ಸಂಘ, ಐವರ್ನಾಡು ಇದರ ಅಧ್ಯಕ್ಷ ರಾಜಾರಾಮ ರಾವ್ ರವರು ದೀಪ...
https://youtu.be/buqkPTAf3rw?si=-0GFG0qm5Xyj1_ip ನಾರ್ಕೋಡು ಕೋಲ್ಚಾರು ರಸ್ತೆಯ ಮಧ್ಯೆ ಬಿಲ್ಲರಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ರಸ್ತೆಗೆ ಇಳಿಯುತ್ತಿರುವ ದೃಶ್ಯವೊಂದು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಳಿ ನಡೆಸಿದೆ. ಕೇರಳದ ಬಂದಡ್ಕ ಕಡೆಗೆ ಸಂಪರ್ಕಿಸುವ ರಸ್ತೆಯಾಗಿದ್ದು ನೂರಾರು ವಾಹನಗಳು ನಿತ್ಯವೂ ಸಂಚರಿಸುತ್ತಿರುತ್ತವೆ. ವಾಹನ ಸವಾರರು ಎಚ್ಚರ ವಹಿಸಬೇಕಾಗಿದೆ....

ಹಿಂದುಳಿದ ವರ್ಗಕ್ಕೆ ಸೇರಿದ ಅಪ್ರಾಪ್ತ ಬಾಲಕಿ ಪೋಟೋ ತೆಗೆದು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಕಿ ಮುಗ್ಧ ಬಾಲಕಿಗೆ ದೌರ್ಜನ್ಯ ಎಸಗಲು ಮುಂದಾದರೆ ಯಾವುದೇ ಕಾರಣಕ್ಕೂ ಸುಮ್ಮನೆ ಹಿಂದೂ ಸಮಾಜ ಕೈ ಕಟ್ಟಿ ಕುಳಿತು ಕೊಳ್ಳುವ ಪ್ರಶ್ನೆಯೇ ಇಲ್ಲ ಹಿಂದೂ ಹೆಣ್ಣು ಮಕ್ಕಳ ಮೇಲಿನ ಇಂತಹ ದೌರ್ಜನ್ಯ ಪ್ರಕರಣಗಳು ಮುಂದುವರಿದರೆ ಹಿಂದೂ ಸಹೋದರಿಯರ ರಕ್ಷಣೆಗೆ ನಾವು...

ಸುಳ್ಯದ ಏರ್ಟೆಲ್ ಕಛೇರಿಯಲ್ಲಿ ಅಪ್ರಾಪ್ತೆ ಬಾಲಕಿಯ ಚಿತ್ರ ಸೆರೆ ಹಿಡಿದ ಪ್ರಕರಣಕ್ಕೆ ವಿಶ್ವ ಹಿಂದು ಪರಿಷದ್ ಭಜರಂಗದಳವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಈ ಘಟನೆ ಒಂದು ಬೆಳಕಿಗೆ ಬಂದಿದ್ದು ಇಂತಹ ಹಲವು ಘಟನೆಗಳು ಹಲವು ನಡೆದಿರಬಹುದು. ಅಲ್ಲದೇ ಒಂದು ಕಛೇರಿಯಲ್ಲಿ ಸಿಸಿ ಕ್ಯಾಮರ ಇಲ್ಲದೇ ಇರುವುದು ಕಂಡಾಗ ಪೋಲಿಸ್ ಇಲಾಖೆಯು ಬೇರೆ ಎಲ್ಲಾ ಅಂಗಡಿಗಳಲ್ಲಿ...

All posts loaded
No more posts