- Sunday
- April 20th, 2025

ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಪೆರಾಜೆ ಸಮೀಪದ ಪಾಲಡ್ಕದಲ್ಲಿ ಸಂಜೆ ಸಂಭವಿಸಿದೆ. ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿನ ಮಧ್ಯೆ ಪಾಲಡ್ಕದಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಮೇ 09 ರಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.ಯೂ ಟ್ಯೂಬರ್ ಹಾಗೂ ಪೋಸ್ಟರ್ ಡಿಸೈನರ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಮುರಳಿ ಕೃಷ್ಣ ವೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು....

ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕನಕಮಜಲಿನ ನೆಡಿಲು ಸತೀಶ್ ಅವರು ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡು, ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕತ್ಸೆಗಾಗಿ ...

ಕೆಲವು ದಿನಗಳ ಹಿಂದೆ ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕೆರೆಮೂಲೆ, ಬೂಡು ಪ್ರದೇಶಕ್ಕೆ ಬಂದು ಕೃಷಿಹಾನಿಗೊಳಿಸಿರುವುದಾಗಿ ವರಿದಿಯಾಗಿದೆ. ಕೆರೆಮೂಲೆ ಭಾಗದ ಈಶ್ವರಪ್ಪ ಗೌಡ ರ ತೋಟ ಸೇರಿದಂತೆ ಪಯಸ್ವಿನಿ ನದಿಗೆ ತಾಗಿಕೊಂಡಿರುವ ಕೃಷಿಕರ ತೋಟಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿಮಾಡಿವೆ. ಅಪಾರ ಪ್ರಮಾಣದಲ್ಲಿ ಬಾಳೆ, ಅಡಿಕೆ, ಕೊಕ್ಕೊಕೃಷಿ ಹಾನಿ ಮಾಡಿವೆ.

ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಶಿವಕುಮಾರ ಕೌಡಿಚ್ಚಾರ್ ಬೆಳಗಾವಿಯಲ್ಲಿ ನಡೆದ ಭೀಕರ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲಸದ ನಿಮಿತ್ತ ಬೆಳಗಾವಿಗೆ ಹೋಗಿದ್ದ ಅವರ ಬೈಕ್ ಬಾರಿಕೇಡ್ ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ವಿವರ ಲಭ್ಯವಾಗಿಲ್ಲ.

ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿಯಾದಮನೆಗಳಿಗೆ ಮೇ 09 ರಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ತೆಕ್ಕಿಲ್ ಭೇಟಿ ನೀಡಿದರು. ದಿವಂಗತ ಅಭಿರ ನಾಗೇಶ ರವರ ಮನೆಯು ಸಂಪೂರ್ಣ ಹಾನಿಯಾಗಿದ್ದು ಸುಮಾರು 05 ಲಕ್ಷನಷ್ಟ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ...

2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ಮಿತ್ತಡ್ಕ ರೋಟರಿ ಪ್ರೌಢ ಶಾಲೆಯ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.ಆಳ್ವ ನಿವಾಸ ನಿಶಾಂತ್ ಆಳ್ವ ಹಾಗೂ ಸುಪರ್ಣ ಎನ್ ಆಳ್ವ ರವರ ಪುತ್ರಿ ಪ್ರಣಮ್ಯ ಎನ್ ಆಳ್ವ 620, ಶಕುಂತಳಾ ನಿಲಯ ರಾಘವೇಂದ್ರ ಎಸ್ ಶೇಟ್ ಹಾಗೂ ವಿನುತ ಆರ್ ಶೇಟ್ ರವರ ಪುತ್ರಿ...

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸುಳ್ಯ ವ್ಯವಸ್ಥಾಪಕರಾದ ಅರುಣ್ ಕುಮಾರ್ ಅವರಿಗೆ ಗದಗ ಶಾಖೆಗೆ ವರ್ಗಾವಣೆಯಾಗಿದೆ. ಅರುಣ್ ಕುಮಾರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯ ಶಾಖೆಯಲ್ಲಿ ನಡೆಯಿತು. ಸುಳ್ಯ ಸೆಲ್ಕೋ ಸೋಲಾರ್ ಶಾಖೆಯ ವ್ಯವಸ್ಥಾಪಕರಾದ ಆಶಿಕ್ ಅವರು ಕಾರ್ಯಕ್ರಮದ ಸ್ವಾಗತವನ್ನು ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಶುಭಾಶಯ ಕೋರಿದರು. ವ್ಯವಸ್ಥಾಪಕರಾದ ಅರುಣ್ ಕುಮಾರ್ ಮಾತನಾಡಿದರು. ಸಹಾಯಕ ವ್ಯವಸ್ಥಾಪಕರಾದ...

ಬಿಜೆಪಿಯ ಯುವ ಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.2022 ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು, ಹಲವಾರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಇದೀಗ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಸ್ತಾಫಾ ಪೈಚಾರ್ ಅನ್ನು ಹಾಸನದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದುವ ಸುಳ್ಯ ತಾಲೂಕಿಗೆ ಶೇ.96.83 ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸುಬ್ರಹ್ಮಣ್ಯ ಹಾಗೂ ಎಡಮಂಗಲದ ಶಾಲೆಗಳೂ ಸೇರಿವೆ. ಈ ಬಾರಿ ಸರಕಾರಿ ಶಾಲೆಗಳೂ ಉತ್ತಮ ಸಾಧನೆ ಮಾಡಿದ್ದೂ ಆರು ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿದೆ. ಅನುದಾನಿತ ಶಾಲೆಗಳ ಪೈಕಿ ಎರಡು ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಅನುದಾನ...

All posts loaded
No more posts