Ad Widget

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿಂಗಾರ ಶೆಟ್ಟಿ

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಹಿರಿಯ ಸರ್ವೆಯರ್ ಸಿಂಗಾರ ಶೆಟ್ಟಿ ನೇಮಕಗೊಂಡಿದ್ದಾರೆ.

. . . . . . . . .

ಸಂಘದ ಅಧ್ಯಕ್ಷರಾಗಿದ್ದ ತೀರ್ಥರಾಮ ಹೊಸೊಳಿಕೆಯವರು ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಸಿಂಗಾರ ಶೆಟ್ಟಿ ಯವರು ಪ್ರಭಾರ ಅಧ್ಯಕ್ಷರಾಗಿದ್ದರು.

ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ತಾಲೂಕು ಸಮಿತಿಯಿಂದ ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗಿತ್ತು. ಇನ್ನು 5 ತಿಂಗಳಲ್ಲಿ ಸಂಘದ ನಿರ್ದೇಶಕ ಸ್ಥಾನದ ಅವಧಿ ಪೂರ್ಣಗೊಂಡು ಚುನಾವಣೆ ಇರುವುದರಿಂದ ಉಪಾಧ್ಯಕ್ಷರೇ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ರಾಜ್ಯ ಸಮಿತಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಂಗಾರ ಶೆಟ್ಟಿಯವರನ್ನೇ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!