Ad Widget

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಕಾಲೇಜಿನಲ್ಲಿ ಸಾಂಸ್ಕೃತಿಕ ಹಬ್ಬ ಮತ್ತು ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ

ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಎರಡು ದಿನಗಳ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಮೇ. 29ನೇ ಬುಧವಾರ ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯದ ಉದ್ಯಮಿ ಹಾಗೂ ಹವ್ಯಾಸಿ ಕಲಾವಿದರಾದ ಯಜ್ಞೇಶ್ ಆಚಾರ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಪ್ರೊಫೆಸರ್ ಲತಾ ಬಿಟಿ ಇವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಂಘದ ಸಂಯೋಜಕರಾದ ವಿನ್ಯಾಸ್  ಹೊಸೋಳಿಕೆ ಇವರು ಸ್ವಾಗತಿಸಿ, ಸಾಂಸ್ಕೃತಿಕ ಸಂಘದ ನಾಯಕಿ ಕುಮಾರಿ ಮೋಕ್ಷಿತ ಎಂ ಇವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ಸಂಘದ ಸದಸ್ಯರಾದ ಕುಮಾರಿ ಭಕ್ತಿ ಶ್ರೀ ಇವರು ನೆರವೇರಿಸಿದರು. ಸಾಂಸ್ಕೃತಿಕ ಸಂಘದ ಸದಸ್ಯರಾದ ಸುಮಿತ್ರ ಕೆ ಮತ್ತು ನಮಿತಾ ಇವರು ಉಪಸ್ಥಿತರಿದ್ದರು. ತದನಂತರ ತರಗತಿವಾರು ಪ್ರತಿಭಾ ಪ್ರದರ್ಶನ ನಡೆದು ಪ್ರದರ್ಶನ ನಡೆದು ಮೇ. 30ನೇ ಗುರುವಾರ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಸಾಂಸ್ಕೃತಿಕ ತಂಡದ ಪೂರ್ವ ಸದಸ್ಯೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಕಾಂ ವಿಭಾಗದಲ್ಲಿ ರಾಂಕ್ ಪಡೆದ ಶ್ರಾವ್ಯ ಎಂ ಎಂ ಭಾಗವಹಿಸಿದ್ದರು. ತೀರ್ಪುಗಾರರಾದ ಡಾ. ಲ, ಶ್ರೀಹರ್ಷಿತ್ ಪಡ್ರೆ, ಸುರೇಶ್ ರೈ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಶ್ರೀ ವಿನ್ಯಾಸ್ ಹೊಸೊಳಿಕೆ ಮತ್ತು ಸಾಂಸ್ಕೃತಿಕ ತಂಡದ ನಾಯಕಿಯಾಗಿರುವ ಮೋಕ್ಷಿತ ಎಂ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಮಧುರ ಕೆ ಮತ್ತು ಧನ್ಯವಾದವನ್ನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿರುವ ಶ್ರೀಮತಿ ಆರತಿ ಇವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು  ಸಾಂಸ್ಕೃತಿಕ ಸಂಘದ ಸದಸ್ಯ ಆಗಿರುವ ಶ್ರೀಮತಿ ಸುಮಿತ್ರ ಇವರು ಮಾಡಿದರು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ತೃತೀಯ ಬಿಕಾಂ ಎ ,ದ್ವಿತೀಯ ಸ್ಥಾನವನ್ನು ದ್ವಿತೀಯ ಬಿಎ ಹಾಗೂ ತೃತೀಯ ಸ್ಥಾನವನ್ನು ಪ್ರಥಮ  ಬಿಕಾಂ ಎ ತಂಡ ಪಡೆದುಕೊಂದಿತು.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!