ಗುತ್ತಿಗಾರು : ಸ್ವಚ್ಛತೆಗಾಗಿ ಎಷ್ಟೆ ಜನ ಜಾಗೃತಿ ಮೂಡಿಸಿದರೂ ಕ್ಯಾರೆ ಅನ್ನದೇ ಕಸ ಎಸೆಯುವವರಿಗೆ ಗ್ರಾಮ ಪಂಚಾಯತ್ ದಂಡ ಪ್ರಯೋಗ ಮಾಡಿದೆ. ಎರಡು ದಿನದ ಹಿಂದೆ ಗುತ್ತಿಗಾರು-ಬಳ್ಪ ರಸ್ತೆಯ ಚತ್ರಪ್ಪಾಡಿ ಬಳಿ ಜೀಪಿನಲ್ಲಿ ಕಸ ತಂದು ಹಾಕಲಾಗಿತ್ತು. ಕಸ ಎಸೆದರನ್ನು ದಾಖಲೆ ಸಮೇತ ಪತ್ತೆ ಮಾಡಿ ಗ್ರಾ.ಪಂ. ರೂ. 1000 ದಂಡ ವಿಧಿಸಿ, ಕಸ ಎಸೆದವರಿಂದಲೇ ಕಸ ವಿಲೇವಾರಿ ಮಾಡಿಸಿದೆ.
ಗ್ರಾಮ ಪಂಚಾಯತ್ ನ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕರು ಕೂಡ ಕಸ ಎಸೆಯುವವರ ಮಾಹಿತಿಯನ್ನು ಪಂಚಾಯತ್ ಗೆ ನೀಡಿ ಸಹಕರಿಸಿದಾಗ ಸ್ವಚ್ಚ ಗ್ರಾಮವಾಗಿ ರೂಪುಗೊಳ್ಳಬಹುದು.
- Sunday
- November 24th, 2024