ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಭಕ್ತಾದಿಗಳು ಬರುತ್ತಲೇ ಇದ್ದಾರೆ. ಬೇಸಿಗೆ ರಜೆ ಕೊನೆಗೊಳ್ಳುವ ಅಂಗವಾಗಿ ಹಾಗೂ ಸರಣಿ ರಜೆಗಳ ಸಂದರ್ಭದಲ್ಲಿ ಭಕ್ತಾದಿಗಳು ಕುಕ್ಕೆಗೆ ಬಂದು ಪವಿತ್ರ ನದಿ ಕುಮಾರಧಾರದಲ್ಲಿ ನದಿ ಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತೆರಳುತ್ತಿರುವುದು ಸಾಮಾನ್ಯವಾಗಿದೆ. ದೇವಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಕ್ತಾದಿಗಳಿಗೆ ಅನುಕೂಲವಾಗುವಂತೆ ನೀರು, ವಸತಿ ಹಾಗೂ ಅನ್ನದಾನ ವ್ಯವಸ್ಥೆಯನ್ನು ನೀಡುವಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವರು. ಹಾಗೆ ಯೇ ಸ್ವಚ್ಛತೆ ಬಗ್ಗೆ ಕೂಡ ಸ್ಥಳೀಯ ಸಂಘ ಸಂಸ್ಥೆಗಳನ್ನು ಒಳಗೊಂಡು ದೇವಳದ ಸಿಬ್ಬಂದಿ ವರ್ಗದವರು ಕಾರ್ಯದಲ್ಲಿ ತೊಡಗಿರುತ್ತಾರೆ.
- Friday
- November 1st, 2024