Ad Widget

ನೂತನ ಬಂಡಿರಥ ಕುಕ್ಕೆ ಸುಬ್ರಹ್ಮಣ್ಯನಿಗೆ ಸಮರ್ಪಣೆ


ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶ್ರೀ ದೇವರ ಭಕ್ತ ಪ್ರಸ್ತುತ ಅಮೇರಿಕಾದ ಟೆಕ್ಸಾಸ್‌ನ ನಿವಾಸಿ ಮತ್ತು ಅಲ್ಲಿನ ಉದ್ಯೋಗಿ ಮೂಲತಃ ಆಂದ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಪಾಲಕ್ಕೋಡ್‌ನ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ವೇಮೂ ಶ್ರೀ ದೇವರಿಗೆ ನೂತನ ಬಂಡಿ ರಥವನ್ನು ಸೇವಾರೂಪದಲ್ಲಿ ನೀಡಿದ್ದಾರೆ. ವೈದಿಕ ವಿದಿವಿಧಾನಗಳ ಮೂಲಕ ಸೋಮವಾರ ಬಂಡಿರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಾಯಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿದಿ ವಿಧಾನಗಳನ್ನು ನೆರವೇರಿಸಿದರು.
ಆದಿತ್ಯವಾರ ರಾತ್ರಿ ಸೇವಾರ್ಥಿಗಳ ಉಪಸ್ಥಿತಿಯಲ್ಲಿ ರಥಸಮರ್ಪಣಾ ಕಾರ್ಯದ ಅಂಗವಾಗಿ ವಾಸ್ತುಹೋಮ ಮತ್ತು ರಾಕ್ಷೋಘ್ನ ಹೋಮ ನೆರವೇರಿತು. ಹೋಮದ ಬಳಿಕ ಪ್ರಧಾನ ಅರ್ಚಕರು ಸೇವಾಕತೃಗಳಿಗೆ ಪ್ರಸಾದ ನೀಡಿದರು.ಸೋಮವಾರ ಮುಂಜಾನೆ ಶ್ರೀ ದೇವಳದಲ್ಲಿ ಗಣಹೋಮ, ರಥಮಂತ್ರ ಹೋಮ ನಡೆಯಿತು.ನಂತರ ರಥಕ್ಕೆ ಕಲಶ ಪ್ರತಿಷ್ಠೆ ನೆರವೇರಿತು.ಬಳಿಕ ಕಲಶಾಭಿಷೇಕ ಸಂಪನ್ನವಾಯಿತು. ಅಂತಿಮವಾಗಿ ಪ್ರಧಾನ ಅರ್ಚಕರು ನೂತನ ರಥಕ್ಕೆ ಪೂಜೆ ನೆರವೇರಿಸಿದರು.ಬಳಿಕ ಶ್ರೀ ದೇವರಿಗೆ ನೂತನ ಬಂಡಿರಥವನ್ನು ಸಮರ್ಪಿಸಿ ಪ್ರಸಾದ ವಿತರಣೆ ನಡೆಯಿತು.
ಸೇವಾಕತೃಗಳಾದ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ವೇಮೂ, ಅವರ ಪತ್ನಿ ಮೌನಿತಾ ವೇಮೂ, ಪುತ್ರಿ ಅನ್ವಿತಾ ರಿಯಾಶ್ರೀ ವೇಮೂ, ತಂದೆ ಸೂರ್ಯನಾರಾಯಣ ರಾವ್ ವೇಮೂ, ಮಾವ ಚಂದ್ರಶೇಖರ ರಾಜು ದಾಟ್ಲ, ಅವರ ಪತ್ನಿ ಶಾರದಾ ದಾಟ್ಲ ವೈದಿಕ ವಿದಿವಿಧಾನಗಳಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಓ ಯೇಸುರಾಜ್, ದಾನಿಗಳ ಆಪ್ತರಾದ ಮೋಹನದಾಸ ರೈ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶ್ರೀ ದೇವಳದ ಗಣೇಶ್ ಆಚಾರ್ಯ, ಬಸವನಮೂಲೆ ಬಸವೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ್ ಸ್ಕಂಧ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರುಗಳಾದ ಶ್ರೀವತ್ಸ ಬೆಂಗಳೂರು, ವನಜಾ.ವಿ.ಭಟ್, ಶೋಭಾ ಗಿರಿಧರ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading