ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ತನ್ನ ಜಾಗದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಕೆಲವರು ಬಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆಂದು ಮಹಿಳೆಯೊಬ್ಬರು ದೂರು ನೀಡಿದ ಘಟನೆ ಮೇ.22 ರಂದು ನಡೆದಿದೆ.
ಆಲೆಟ್ಟಿ ಗ್ರಾಮದ ಮೈಂದೂರು ಕಾನ ಮನೆ ದೇವಕಿ (63) ಎಂಬವರು ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ಕೃಷಿ ಜಮೀನು ಹೊಂದಿದ್ದಾರೆ. ಮೇ. 22 ರಂದು ಮಹಿಳೆ ನನ್ನ ಗಂಡ ಸುಂದರ ನಾಯ್ಕ ಹಾಗೂ ಕೆಲಸದಾಳುಗಳೊಂದಿಗೆ ತೋಟಕ್ಕೆ ಹೋಗಿ ಕೆಲಸ ಪ್ರಾರಂಭಿಸುವಾಗ, ಆರೋಪಿತರುಗಳಾದ ತೀರ್ಥರಾಜ, ಶಿವಪ್ಪ ನಾಯ್ಕ, ಯತೀನ್, ಪಲ್ಲವಿ ಹಾಗೂ ಶ್ರುತಿ ಎಂಬವರು ಕೈಯಲ್ಲಿ ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಬೆದರಿಕೆ ಹಾಕುತ್ತಾ, ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೆಲಸಕ್ಕೆ ಅಡ್ಡಿಯುಂಟು ಮಾಡಿರುತ್ತಾರೆ. ಹಾಗೂ ತನ್ನ ಗಂಡನಿಗೆ ಹಲ್ಲೆ ನಡೆಸಿದ್ದು, ಈ ವೇಳೆ ಅಲ್ಲಿದ್ದ ಕೆಲಸದಾಳುಗಳು ಬಂದು ಪಿಯಾದಿದಾರರನ್ನು ಮತ್ತು ಅವರ ಗಂಡನನ್ನು ಬಿಡಿಸಿರುತ್ತಾರೆ. ಹಲ್ಲೆಯಿಂದಾದ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ದೇವಕಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.