Ad Widget

ಸುಳ್ಯ: ಎನ್ನೆಂಸಿ ಟ್ಯಾಲೆಂಟ್ ಹೈರ್ – 2k24  ಉದ್ಯೋಗ ಮೇಳ


ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳಿಗೆ ಬೃಹತ್ ಉದ್ಯೋಗ ಮೇಳ ಮೇ28ರಂದು  ನಡೆಯಲಿದೆ.
ಎನ್ನೆಂಸಿ ಟ್ಯಾಲೆಂಟ್ ಹೈರ್ – 2k24 ಉದ್ಯೋಗ ಮೇಳ ಕೆವಿಜಿ ಕ್ಯಾಂಪಸ್ ನಲ್ಲಿ  ನಡೆಯಲಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ  ಮಾತನಾಡಿದ ಎನ್ ಎಂಸಿ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ.ಎಂ , ಈ ಉದ್ಯೋಗ ಮೇಳವು ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೋರಿಸಲಿದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 9.00 ಗಂಟೆಗೆ ಕ್ಯಾಂಪಸ್ ನೇಮಕಾತಿ ಆರಂಭವಾಗಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ. ಉದ್ಘಾಟಿಸಲಿದ್ದಾರೆ. ಯಾವುದೇ ಕಾಲೇಜಿನ ಅಂತಿಮ ಪದವಿ ಓದುತ್ತಿರುವ ಅಥವಾ ಪದವಿ ಪೂರೈಸಿದ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈ ರೀತಿಯ ಉದ್ಯೋಗ ಮೇಳವನ್ನು ಕಾಲೇಜಿನಲ್ಲಿ ಸತತ ಮೂರನೇ ವರ್ಷ ಆಯೋಜಿಸುತ್ತಿದ್ದೇವೆ. ಕಳೆದ ವರ್ಷ ಮಾಜಿ ಸಚಿವ ಎಸ್ ಅಂಗಾರರು ಪ್ರಾಯೋಜಿಸಿದ ಉದ್ಯೋಗ ಮೇಳದ ಆತಿಥ್ಯವನ್ನು ನೆಹರೂ ಮೆಮೋರಿಯಲ್ ಕಾಲೇಜು ವಹಿಸಿತ್ತು. ಇದರಲ್ಲಿ 1724 ಮಂದಿ ಉದ್ಯೋಗ ಆಕಾಂಕ್ಷಿತರು ಭಾಗವಹಿಸಿದ್ದರು. 1128 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಈ ಬಾರಿ ಸುಮಾರು 22 ಕ್ಕಿಂತಲೂ ಹೆಚ್ಚು ಸಂಸ್ಥೆಗಳು ಸಂದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಳ್ಯ, ಪುತ್ತೂರು, ಮಡಿಕೇರಿ ತಾಲೂಕುಗಳು ಹಾಗೂ ಸಮೀಪದ ಇನ್ನಿತರ ಗ್ರಾಮೀಣ ಭಾಗಗಳ ಆಕಾಂಕ್ಷಿತರಿಗೆ ಈ ಬಾರಿಯ ಉದ್ಯೋಗ ಮೇಳ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ತಿಳಿಸಿದರು.

ಈ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು https://docs.google.com/forms/d/e/1FAIpQLSfo3ioBJ_4eJEnTJvc-jBZ4paDxBC39bS5xZuMHRVsG480Ong/viewform ಈ ಲಿಂಕ್ ಒತ್ತಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 08257230331, 08257233331) ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಈಗಾಗಲೇ ಹೆಸರು ನೊಂದಾಯಿಸಿರುವ ಸಂಸ್ಥೆಗಳು:

1. RINEX TECHNOLOGIES PRIVATE LIMITED
2. Transformative Technologies
3. Durga Motors
4. Apollo Pharmacies Ltd
5. Master Plannery
6. Kanchana Auto Motive
7. Muthoot finance Pvt Ltd
8. Prakash Retail Private limited – Harsha
9. ABF Group of Companies – Mangalore
10. Cogent E-Services Ltd
11. Karnataka Agencies – Mahindra
12. TVS TRAINING AND SERVICES (ICICI BANK)
13. EXPERT PU COLLEGE
14. SBI LIFE
15. Employ Me HR Solutions
16. Abhivruddi Trust Bangalore
17. Metasoft IT Solutions
18. Max Fashion
19. Mondovi Motors
20. Winman Software
21. Diya Systems
22. Tirumala Honda
23. Mountain Aqua Minerals Nelyadi
23. KVG Medical College

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading