ಸುಳ್ಯ ನಗರ ಕಡೆಯಿಂದ ಬಂದ ಕಾರೊಂದು ಕಾರು ಹಾಗೂ ಪಿಕಪ್ ಗೆ ಗುದ್ದಿ ನಿಲ್ಲಿಸದೇ ಹೋಗಿ ಹಳೆಗೇಟು ಪೆಟ್ರೋಲ್ ಪಂಪ್ ಸಮೀಪ ಟಯರ್ ಪಂಚರ್ ಆಗಿ ಚಾಲಕ ಪೋಲೀಸರ ಕೈಗೆ ಸಿಕ್ಕಿದ ಘಟನೆ ಇಂದು ರಾತ್ರಿ ನಡೆದಿದೆ.
ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರೆನ್ನಲಾಗಿದೆ. ಕಾರ್ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಬಂದಿದ್ದು, ಹಳೆಗೇಟು ಪೆಟ್ರೋಲ್ ಪಂಪ್ ಎದುರುಗಡೆ ,ಕಾರಿನ ಟಯರ್ ಪಂಚರ್ ಆದ ಕಾರಣ ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.