Ad Widget

ಅಜ್ಜಾವರ:ರಂಗೋಲಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ.

ಅಜ್ಜಾವರ:ಚೈತ್ರ ಯುವತಿ ಮಂಡಲ,ಪ್ರತಾಪ ಯುವಕ ಮಂಡಲ ಅಜ್ಜಾವರ ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಇವುಗಳ ಸoಯುಕ್ತ ಆಶ್ರಯದಲ್ಲಿ 2ನೇ ವರ್ಷದ "ರಂಗೋಲಿ" ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನವಾದ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಭೇಟಿ ನೀಡಿ ಶುಭ ಹಾರೈಸಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಚೈತ್ರ ಯುವತಿ...

ಮಾಯಿಲಪ್ಪ ಗೌಡ ಕಣಿಪ್ಪಿಲ ನಿಧನ

ಐವರ್ನಾಡು ಗ್ರಾಮದ ಕಣಿಪ್ಪಿಲ ಮಾಯಿಲಪ್ಪ ಗೌಡ ಮೇ.18 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಿರಿಜಾ, ಪುತ್ರಿಯರಾದ ಶ್ರೀಮತಿ ಚೈತ್ರಾ, ಕು.ವಿದ್ಯಾರಾಣಿ, ಕು. ಗಾಯತ್ರಿ , ಅಳಿಯ ಲೋಕೇಶ್ ದೇವರಗುಂಡ ಅವರನ್ನು ಅಗಲಿದ್ದಾರೆ.
Ad Widget

ಸುಳ್ಯ :  ವಿದ್ಯಾರ್ಥಿನಿಯ ಜತೆ ಅನುಚಿತವಾಗಿ ವರ್ತಿಸಿದ ಯುವಕ – ಮನೆಯವರು ಬಂದಾಗ ಪರಾರಿ – ದೂರು ದಾಖಲು

ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ ಮೇ. 21 ರಂದು ನಡೆದಿದ್ದು,  ವಿದ್ಯಾರ್ಥಿನಿ ತಂದೆಗೆ ಮಾಡಿ ಕರೆಸಿಕೊಂಡಾಗ ಆ ಯುವಕ ಓಡಿ ಪರಾರಿಯಾದ ಎನ್ನಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಕಲ್ಲುಮುಟ್ಲು ಕಡೆಯ ಯುವತಿಯೊಬ್ಬಳು...

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ‌ ಮಂಗಳೂರು ವಿ.ವಿ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ-
ಚಾಂಪಿಯನ್ ಪಟ್ಟ ಉಳಿಸಿಕೊಂಡ ಆಳ್ವಾಸ್ ಕಾಲೇಜು ಮೂಡಬಿದಿರೆ

ಉದ್ಘಾಟನಾ ಸಮಾರಂಭಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ಕಾಲೇಜಿನ ಮೈದಾನದಲ್ಲಿ ಮೇ-21ರಂದು ನಡೆಯಿತು. ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು ಪಂದ್ಯಾಟವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ...

ಕುಕ್ಕುಜಡ್ಕ: ಖಂಡಿಗೆಮೂಲೆಯಲ್ಲಿ ರಸ್ತೆಗುರುಳಿದ  ಮರ,   ಸಂಚಾರ ವ್ಯತ್ಯಯ

ರಾತ್ರಿ ಸುರಿದ ಮಳೆಗೆ ಮರವೊಂದು ರಸ್ತೆಗೆ ಉರುಳಿದ ಘಟನೆ ಕುಕ್ಕುಜಡ್ಕ  ರಸ್ತೆಯ ಖಂಡಿಗೆಮೂಲೆಯಲ್ಲಿ ನಡೆದಿದೆ. ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಹಲ್ಲುಜ್ಜಲು ಮರೆತರೆ ಆಲ್‍ಝೈಮರ್ಸ್ ಬಂದೀತು ಜೋಕೆ !!!

ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಲ್ಲು ಶುಚಿಯಾಗಿದ್ದಲ್ಲಿ ವಸಡಿನ ಆರೋಗ್ಯ ವೃದ್ಧಿಯಾಗಿ ಹಲ್ಲುಗಳು ಗಟ್ಟಿಯಾಗಿ, ನಾವು ತಿಂದ ಆಹಾರ ಸರಿಯಾಗಿ ಪಚನಗೊಂಡು ದೈಹಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಅದರಿಂದ ವ್ಯಕ್ತಿಯ ಮಾನಸಿಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ವಸಡಿನ ರೋಗಕ್ಕೆ ನಾಂದಿ...

ಸೋರಿಯಾಸಿಸ್- ಚರ್ಮದ ಕಾಯಿಲೆ

ಸೋರಿಯಾಸಿಸ್ ಎಂಬುದು ದೀರ್ಘಕಾಲೀನ ಚರ್ಮದ ಕಾಯಿಲೆ. ತುರಿಕೆ, ಅಲ್ಲಲ್ಲಿ ಚರ್ಮದ ಪದರ ಎದ್ದು ಬರುವುದು ಇತ್ಯಾದಿ ಲಕ್ಷಣಗಳಿಂದ ಕೂಡಿರುತ್ತದೆ. ವಿಶೇಷವಾಗಿ ಮೊಣಕೈ, ಮೊಣಕಾಲು, ಎದೆ ಮತ್ತು ಹೊಟ್ಟೆಯ ಭಾಗ, ತಲೆಯ ನೆತ್ತಿಯ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದು ನೋವಿನಿಂದ ಕೂಡಿರಬಹುದು ಅಥವಾ ನೋವು ಇಲ್ಲದೇ ಇರಬಹುದು. ನಿದ್ರೆಗೆ ಅಡ್ಡಿಪಡಿಸಬಹುದು. ಕೆಲಸಕ್ಕೆ ಗಮನ ಕೊಡಲು ಕಷ್ಟ...
error: Content is protected !!