Ad Widget

ಗುತ್ತಿಗಾರು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ



ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಗುತ್ತಿಗಾರು ಗ್ರಾಮ ಪಂಚಾಯತ್, ಅರಿವು ಕೇಂದ್ರ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಮೇ.02 ರಿಂದ ಮೇ.16ರ ರವರೆಗೆ 15 ದಿನಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮವು ಮೇ.16 ರಂದು ನಡೆಯಿತು.

. . . . . . .

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ “ಬೇಸಿಗೆಯಲ್ಲಿ ಮಕ್ಕಳ ಆರೋಗ್ಯ, ಅಭಿನಯ ಗೀತೆ/ನೃತ್ಯ, ನಿಧಿ ಶೋಧ, ಚಿತ್ರಕಲೆ, ವಿನೋದ ವಿಜ್ಞಾನ, ಮಕ್ಕಳು ಮತ್ತು ಪ್ರಕೃತಿ ಬಾಂಧವ್ಯ, ಯೋಗ & ಧ್ಯಾನ, ಮೋಜಿನ ಗಣಿತ, ಪರಿಸರ ಸ್ವಚ್ಛತಾ ಗೀತೆ, ಚದುರಂಗ ಆಟ, ಸ್ವರಚಿತ ಕವನ/ಕಥೆ, ಕಸದಿಂದ ರಸ, ಆರಿವು ಮೂಡಿಸುವ ಚಟುವಟಿಕೆಗಳು ಮಾತ್ರವಲ್ಲದೆ ಅಧ್ಯಯನ ಪ್ರವಾಸದಲ್ಲಿ ಸುಬ್ರಹ್ಮಣ್ಯ ಪೋಲೀಸ್ ಠಾಣೆ, ಸುಬ್ರಹ್ಮಣ್ಯ ವಲಯ ಅರಣ್ಯ ಕಛೇರಿ, ಸಾಲು ಮರದ ತಿಮ್ಮಕ್ಕ ಪಾರ್ಕ್, ಕಲ್ಲಾಜೆ ನರ್ಸರಿ ವೀಕ್ಷಣೆ ಮಾಡಲಾಯಿತು.”
ಅಧ್ಯಯನ ಪ್ರವಾಸಕ್ಕೆ ಸುಬ್ರಹ್ಮಣ್ಯ ಆರಕ್ಷಕ ಠಾಣಾಧಿಕಾರಿಗಳಾದ ಕಾರ್ತಿಕ್ ಹಾಗೂ ಸಿಬ್ಬಂದಿವರ್ಗದವರು, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿಗಳಾದ ವಿಮಲ್ ಬಾಬು ಹಾಗೂ ಸಿಬ್ಬಂದಿವರ್ಗದವರು, ಮನೋಜ್ ಕುಮಾರ್, ಸದಾಶಿವ ಸಿಂದಿಗಾರ್ ಅವರು ಸಹಕರಿಸಿದರು.
15 ದಿವಸಗಳ ಕಾಲ ನಡೆದ ಈ ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಗುರುಪ್ರಸಾದ್, ಚೈತನ್ಯ ವಳಲಂಬೆ, ಜೀವಿತಾ&ಪೂಜಾ, ಸುಬ್ರಹ್ಮಣ್ಯ ಏನೆಕಲ್ಲು, ಸವಿತಾ ಕುಮಾರಿ, ಅರವಿಂದ ಕುಡ್ಲ, ಸಂತೋಷ್ ಮುಂಡೋಕಜೆ, ಪೂರ್ಣಿಮಾ, ಕರ್ಣ ಸಾಲ್ತಾಡಿ, ರಮೇಶ್, ಯೋಗೀಶ್ ಹೊಸೊಳಿಕೆ, ಲಿಖಿತಾ ಹೊಸೊಳಿಕೆ ಹಾಗೂ ಏನ್.ಆರ್.ಎಲ್.ಎಂ ತಂಡದವರು ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರು ಹಾಗೂ ಹಿಂದಿ ಪಂಡಿತರಾದ ಶ್ರೀಮತಿ ರಾಜೇಶ್ವರಿ.ಸಿ.ವಿ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕ.ಸಾ.ಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ ಉಪಸ್ಥಿತರಿದ್ದರು.
ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಿಗೆ ಇಲಾಖೆಯ ವತಿಯಿಂದ ಅಭಿನಂದನಾ ಪತ್ರ ನೀಡಲಾಯಿತು.
ಕ.ಸಾ.ಪ ನಿರ್ದೇಶಕ ಯೋಗೀಶ್ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕರಾದ ಅಭಿಲಾಷಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.
40 ಶಿಬಿರಾರ್ಥಿಗಳು, ಪೋಷಕರು ಹಾಗೂ ಸಂಜೀವಿನಿ ಸಂಘದವರು ಪಾಲ್ಗೊಂಡು ಬೇಸಿಗೆ ಶಿಬಿರವನ್ನು ಯಶಸ್ವಿಗೊಳಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!