
ಮಾಣಿ ಮೈಸೂರು ಹೆದ್ದಾರಿಯ ಹಳೆಗೇಟು ಬಳಿ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆಯ ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿದೆ. ಮಳೆಯ ನೀರಿನೊಂದಿಗೆ ಜಲ್ಲಿಕಲ್ಲು, ಮರಳು ಬಂದು ರಸ್ತೆಯಲ್ಲಿ ನಿಲ್ಲುತ್ತಿದ್ದು ವಾಹನ ಸವಾರರು ಸಂಕಷ್ಟ ಅನುಭವಿಸುಂತಾಗಿದೆ. ಮಳೆ ಆರಂಭದಿಂದ ಹಲವಾರು ದ್ವಿಚಕ್ರ ಸವಾರರರು ಸ್ಕಿಡ್ ಆಗಿ ಬೀಳುವಂತಾಗಿದೆ.
