
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಚೌದರಿ ಮೇ.18 ರಂದು ಸುಳ್ಯಕ್ಕೆ ಆಗಮಿಸಿದಾಗ ಅವರನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನದ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು, ಹಾರ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿಯವರು ಪ್ರತಿಷ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂಧರ್ಭದಲ್ಲಿ ರಾಜ್ಯ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಹೈಕೋರ್ಟ್ ಪ್ಲೀಡರ್ ನ್ಯಾಯವಾದಿ ವಹೀದಾ ಹಾರೀಸ್ ತೆಕ್ಕಿಲ್, ಬೆಂಗಳೂರು ಪಾರ್ವಡ್ ಗ್ರೂಪಿನ ಹಾರೀಸ್ ತೆಕ್ಕಿಲ್, ಪ್ರತಿಷ್ಥಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ನಗರ ಪಂಚಾಯತ್ ನಾಮನಿರ್ದೇಶನ ಸದಸ್ಯ ರಾಜು ಪಂಡಿತ್, ಸುಳ್ಯ ವೆಂಕಟರಮಣ ಕೋ.ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಪ್ರಹ್ಲಾದ್ ಪುತ್ತೂರು, ಹನೀಫ್ ಬೀಜದ ಕೊಚ್ಚಿ, ಸಲೀಮ್ ಪೆರಂಗೋಡಿ, ನ್ಯಾಯವಾದಿ ಅಬೂಬಕ್ಕರ್, ಫಾತಿಮತ್ ಶಿಬಾ ಬೀಜಕೊಚ್ಚಿ, ಜಾವೇದ್ ತೆಕ್ಕಿಲ್, ಬೋಜಪ್ಪ ನಾಯ್ಕ್, ಸುದ್ದಿ ಬಿಡುಗಡೆಯ ಸಂಪಾದಕರಾದ ಹರೀಶ್ ಬಂಟ್ವಾಳ, ಪತ್ರಕರ್ತ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.