ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ ಸಮಾಜದ ಅಂಗೀ ಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2023-24ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ(ಡಿ.ಎಂ.ಇ.ಡಿ) ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಹಾಜರಾದ ಎಲ್ಲಾ 25 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ ಸತತ 7ಬಾರಿ ಶೇ.100 ಫಲಿತಾಂಶ ದಾಖಲಾಗಿದೆ. 13 ವಿದ್ಯಾರ್ಥಿ ಶಿಕ್ಷಕಿಯರು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿ ಶಿಕ್ಷಕಿಯರು ಪ್ರಥಮ ದರ್ಜೆಯಲ್ಲಿ, ಇಬ್ಬರು ದ್ವಿತೀಯ ದರ್ಜೆಯಲ್ಲೂ ಉತ್ತೀರ್ಣರಾಗಿದ್ದಾರೆ. ಕಾಂಚನ (1068), ಮೀರಾ (1021), ಗ್ರೀಷ್ಮ ಕೆ (1013) ಚೈತ್ರ ಎಂ (1012), ಹರ್ಷಿತಾ ಸಿ. ಎಂ (1004), ಪೂರ್ಣಿಮಾ ಕೆ. ಎಸ್ (984), ರಚನಾ (981), ಫಾತಿಮತ್ ರೋಝಾ (975), ಐಶ್ವರ್ಯರಾಜ್ (968), ಫಾತಿಮತ್ ತೌಸೀರಾ (962), ಶಾಹಿನಾ ಎನ್ (962), ದೀಪಿಕಾ ಸಿ ಹೆಚ್ (960), ರಂಜಿತಾ ಬಿ (960) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸುಚಿತ್ರ, ಉಷಾ ಸಿ ಪಿ., ಧನ್ಯಶ್ರೀ ಕೆ ಎಸ್, ಮೇಘನಾ ಕೆ ಎಸ್, ಗುಣಶ್ರೀ ಕೆ, ರಾಜೇಶ್ವರಿ ಕೆ, ಸುಶ್ಮಿತಾ ಎಂ ಎಸ್, ಸಂಧ್ಯಾ ಎನ್, ಪ್ರಮೀಳಾ ಬಿ, ರಕ್ಷಿತಾ ಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Tuesday
- December 3rd, 2024