ದಿ.ನವೀನ್ ರೈ ಸಹ ಭೋಜನ ಮತ್ತು ತಮ್ಮ ಡೈರಿಯ ಕುರಿತು ಮೊದಲ ಭಾರಿಗೆ ಪ್ರಸ್ತಾಪಿಸಿದ ಪ್ರಮುಖರು.
ಸುಳ್ಯ: ದಿ. ನವೀನ್ ಕುಮಾರ್ ರೈ ಮೇನಾಲ ಸ್ಮರಣಾರ್ಥ ರಕ್ತದಾನ ಶಿಬಿರವು ಮೇನಾಲ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿನಾಂಕ೧೮-೦೫-೨೪ ರಂದು ಜರುಗಿತು.
ಸಭಾ ಕಾರ್ಯಕ್ರಮವು ಮೇನಾಲ ಶ್ರೀ ಕೃಷ್ಣ ಭಾಜಾನ ಮಂದಿರದಲ್ಲಿ ಡಾ. ಮನೋಜ್ ಅಡ್ಡಂತಡ್ಕ ಅಧ್ಯಕ್ಷರು ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ವೇದಿಕೆಯಲ್ಲಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಮತನಾಡುತ್ತಾ ದಿ.ನವೀನ್ ರೈ ಯಾವುದೇ ಜಾತಿ ಮತ ಭೇಧವಿಲ್ಲದೆ ಸಹಭೋಜನ ಏರ್ಪಡಿಸಿ ಅಲ್ಲಿ ಬಾಳೆ ಎಲೆ ತೆಗೆಯುವುದು ಅಲ್ಲದೇ ಪ್ರತಿಯೊಬ್ಬರನ್ನು ಮನೆಗೆ ಕರೆದು ಅಥಿತಿಗಳಾಗಿ ನೋಡುತ್ತಿದ್ದಂತಹ ಒಬ್ಬ ಮೇರು ವ್ಯಕ್ತಿತ್ವ ಎಂದು ಅವರ ಸ್ಮರಣೆಯನ್ನು ಮಾಡಿದರು. ಚಂದ್ರಶೇಖರ ತಳೂರು , ಸುಧಾಕರ ರೈ ಪಿ ಬಿ ನಳೀನ್ ಕುಮಾರ್ ಕಟೀಲ್ ದಿ.ನವೀನ್ ಕುಮಾರ್ ರೈ ಯವರ ಸ್ಮರಣೆಯನ್ನು ಮತ್ತು ಜನಪರ ಕಾಳಜಿಯನ್ನು ವಿವರಿಸಿದರು. ಸಭಾ ವೇದಿಕೆಲ್ಲಿ ದಿ.ನವೀನ್ ಕುಮಾರ್ ರೈ ಸಹೋದರ ನಯನ್ ರೈ ಉಪಸ್ಥಿತರಿದ್ದರು . ರಾಜೇಶ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ದಿ.ನವೀನ್ ರೈಯವರು ತಮ್ಮ ಡೈರಿಯಲ್ಲಿ ಮೊದಲ ಸಾಲಿನಲ್ಲಿ ಸರ್ವೇ ಜನಃ ಸುಖಿನಾ ಭವಂತು ಎಂದು ಬರೆದಿದ್ದು ರಾಜಕೀಯದ ಕುರಿತಾಗಿ ಹಣ ಮಾಡಲು ರಾಜಕೀಯವಲ್ಲ ಸೇವೆಗಾಗಿ ರಾಜಕೀಯ ಎಂದು ಬರೆದಿದ್ದರು ಅಲ್ಲದೇ ಅದೇ ಮಾದರಿಯಲ್ಲಿ ಅವರು ಅಜಾತಶತ್ರುವಾಗಿ ಇದ್ದರು ಎಂದು ಹೇಳಿ ಕಂಬನಿ ಮಿಡಿದರು. ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಬಾಲಕೃಷ್ಣ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ , ಎ ವಿ ತೀರ್ಥರಾಮ , ಎನ್ ಎ ರಾಮಚಂದ್ರ , ಹರೀಶ್ ಕಂಜಿಪಿಲಿ , ಸುರೇಶ್ ಕಣೆಮರಡ್ಕ , ಪುಸ್ಪಾ ಮೇದಪ್ಪ , ಭಾರತೀ , ವಿನುತ ಪಾತಿಕಲ್ಲು , ಸೇರಿದಂತೆ ಪ್ರಮುಖ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಸೇರಿದಂತೆ ಸಾರ್ವಜನಿಕರು ಮತದಾನ ಮಾಡುವ ಮೂಲಕ ದಿ. ನವೀನ್ ಕುಮಾರ್ ರೈ ಮೇನಾಲರ ಸಮಾಜ ಸೇವೆಯ ಹಾದಿಯಲ್ಲಿ ನಡೆಯುವ ಚಿಂತನೆಗಳೊಂದಿಗೆ ರಕ್ತದಾನವನ್ನು ಮಾಡಿದರು.