Ad Widget

ಸಂಪಾಜೆ : ವಿಪತ್ತು ನಿರ್ವಹಣಾ ಸಮಿತಿ ಸಭೆ – ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ



ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ಮೇ.14 ರಂದು ನಡೆಯಿತು.‌ ಈ ಸಭೆಯಲ್ಲಿ ಕೈಗೊಳ್ಳಬಹುದಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸಿ, ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ಸಂಪಾಜೆ ಗ್ರಾಮದ ವಿವಿಧೆಡೆ ಇರುವ  ಅಪಾಯಕಾರಿ ಮರಗಳನ್ನು ಬುಡಸಹಿತ ತೆರವುಗೊಳಿಸಲು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ನೀಡುವುದೆಂದೂ ನಿರ್ಣಯಿಸಲಾಯಿತು. ಮೆಸ್ಕಾಂ ಇಲಾಖೆಯವರು ವಿದ್ಯುತ್ ಲೈನ್ ಮೇಲೆ ಹಾದು ಹೋಗುವ ಲೈನ್ ನಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಬಗ್ಗೆ ಸೂಚಿಸಲಾಯಿತು. ಮಾಣಿ-ಮೈಸೂರು ರಾಷ್ರ್ಟೀಯ ಹೆದ್ದಾರಿಯ ಪೇರಡ್ಕ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಚರಂಡಿಯ ನೀರು ತುಂಬಿ ತೊಂದರೆ ಉಂಟಾಗಿರುವುದರಿಂದ ಚರಂಡಿಯನ್ನು ಸರಿಪಡಿಸುವಂತೆ ರಾಷ್ರ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸುವುದು. ಸಂಪಾಜೆ ಗ್ರಾಮದ ದರ್ಖಾಸ್ತು ಅಂಗನವಾಡಿ ಬಳಿ ಹೊಸದಾಗಿ ಮಾಡಿರುವ ಚರಂಡಿಯಲ್ಲಿ ನೀರು ಹರಿದು ಹೋಗದೇ ಇರುವುದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದು. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಗಾಜು, ಬಾಟಲಿಗಳು ಹಾಗೂ ನಿರುಪಯುಕ್ತ ವಸ್ತುಗಳನ್ನು ಸಾರ್ವಜನಿಕ ಪರಿಸರದಲ್ಲಿ ಬಿಸಾಡುತ್ತಿರುವುದರಿಂದ ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಹೋಗಿ ಚರಂಡಿ ಮುಚ್ಚಿ ಕೃತಕ ಪ್ರವಾಹ ಉಂಟಾಗಿ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರಿಂದ ವರ್ತಕರು ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯದಂತೆ ಕ್ರಮ ವಹಿಸುವುದು. ಮತ್ತು ಕಸ ಎಸೆಯುವವರ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ವಹಿಸುವುದಾಗಿ ನಿರ್ಣಯಿಸಲಾಯಿತು. ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಚರಂಡಿ ನಿರ್ಮಿಸಿ, ನೀರು ನಿಲ್ಲದಂತೆ ಕ್ರಮ ವಹಿಸುವುದು. ಮತ್ತು ಸಾರ್ವಜನಿಕ ರಸ್ತೆಗೆ ಬಾಗಿರುವ ಬೇಲಿ ಗಿಡಗಳ ಕೊಂಬೆಗಳನ್ನು ಕಡಿದು ಸ್ವಚ್ಚಗೊಳಿಸುವ ಬಗ್ಗೆ ಚರ್ಚಿಸಲಾಯಿತು.
       ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸರಿತ ಒಲ್ಗಾ ಡಿಸೋಜ, ಕಾರ್ಯದರ್ಶಿ ಶ್ರೀಮತಿ ಪದ್ಮಾವತಿ ಎಸ್ ಎ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ, ಉಪವಲಯ ಅರಣ್ಯಾಧಿಕಾರಿ ಚಂದ್ರು ಬಿ.ಜಿ, ಗಸ್ತು ಅರಣ್ಯ ಪಾಲಕರಾದ  ಮನೋಜ್ ಬಿ ವಿ, ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕಲ್ಲುಗುಂಡಿ ಸಂಪಾಜೆ ಇಲ್ಲಿಯ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಡಿ, ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ, ರಾಜರಾಮಪುರ, ದೊಡ್ಡಡ್ಕ ಇಲ್ಲಿಯ ಮುಖ್ಯ ಶಿಕ್ಷಕಿ ಶ್ರೀಮತಿ ಭವಾನಿ ಪಿ, ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಹರ್ಷಿತಾ ಬಿ.ಹೆಚ್, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಆಶಾ ಎಂ ಕೆ, ಶ್ರೀಮತಿ ಪ್ರೇಮಲತಾ ಯು ಬಿ, ಶ್ರೀಮತಿ ಮೋಹನಾಂಗಿ, ಆಂಬುಲೆನ್ಸ್ ತುರ್ತು ತಂಡ ಸುಳ್ಯದ ಸಂಯೋಜಕರಾದ  ಸಿದ್ದೀಕ್ ಗೂನಡ್ಕ ಉಪಸ್ಥಿತರಿದ್ದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!