ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಉಧ್ಯಮ, ಕೃಷಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ
ಮೂರುವರೆ ದಶಕಗಳಿಂದ ಕ್ರೀಯಾಶೀಲರಾಗಿರುವ, ಜಾತಿ ಮತ ಬೇದವಿಲ್ಲದೆ ಅಪಾರ ಅಭಿಮಾನಿಗಳನ್ನು
ಹೊಂದಿರುವ ಟಿ.ಎಂ ಶಹೀದ್ ತೆಕ್ಕಿಲ್ ಇವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮೇ. 15
ರಂದು ಸುಳ್ಯದ ಸಹನಾ ಆರ್ಕೆಡ್ ನಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ
ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಟಿ.ಎಂ ಶಾಹಿದ್ ತೆಕ್ಕಿಲ್ ರವರನ್ನು ಸಾರ್ವಜನಿಕವಾಗಿ ರಾಜ್ಯ ಸಚಿವರುಗಳ, ಶಾಸಕರ,
ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಸನ್ಮಾನಿಸಲು ತೀರ್ಮಾನಿಸಿ
ಅಭಿನಂದನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿಯಾಗಿ
ಪವಾಝ್ ಕನಕಮಜಲು, ಸಂಚಾಲಕರಾಗಿ ಕೆ.ಟಿ.ವಿಶ್ವನಾಥ್, ಉಪಾಧ್ಯಕ್ಷರುಗಳಾಗಿ ಇಕ್ಬಾಲ್ ಎಲಿಮಲೆ, ಪರಶುರಾಮ
ಚಿಲ್ತಡ್ಕ, ಜಿ.ಕೆ ಹಮೀದ್ ಗೂನಡ್ಕ, ಮೂಸಾ ಪೈಂಬಚ್ಚಾಲ್, ಹಾಜಿ ಇಬ್ರಾಹಿಂ ಕತ್ತರ್ ಕಾರ್ಯದರ್ಶಿಗಳಾಗಿ ಕೆ.ಎಸ್
ಉಮ್ಮರ್, ಎ.ಬಿ ಮೊಯಿದೀನ್ ಕಳಂಜ, ಸಿದ್ಧೀಕ್ ಕೊಕ್ಕೊ ಹಾಗೂ ಕೋಶಾಧಿಕಾರಿಯಾಗಿ ತಾಜ್ ಮೊಹಮ್ಮದ್
ಸಂಪಾಜೆ ಆಯ್ಕೆಯಾದರು. ಸದಸ್ಯರುಗಳಾಗಿ ಕೆ.ಎಂ ಮುಸ್ತಪ, ಶರೀಫ್ ಕಂಠಿ, ಬಾಲಚಂದ್ರ ರೈ, ಚಂದ್ರಲಿಂಗಂ,
ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಶ್ರಫ್ ಗುಂಡಿ, ಎಸ್.ಕೆ ಹನೀಫ್ ಸಂಪಾಜೆ, ಅಬ್ದುಲ್ ಮಜೀದ್ ನಡುವಡ್ಕ
ಅಡ್ಕಾರ್, ಆರ್.ಬಿ ಬಶೀರ್, ಹನೀಫ್ ಬೀಜಕೊಚ್ಚಿ, ರಶೀದ್ ಜಟ್ಟಿಪಳ್ಳ, ಬಷೀರ್ ಕೆ. ಎಂ, ಗಣೇಶ್ ಸುಳ್ಯ,ಕೆ.ಎಂ
ಇಬ್ರಾಹಿಂ ಹಳೆಗೇಟು, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಯೂಸೂಫ್ ಅಂಜಿಕ್ಕಾರ್, ಕೆ.ಎಂ ಉಮ್ಮರ್ ಫಾರೂಕ್,
ಇಸ್ಮಾಯಿಲ್ ಕಳಂಜ, ಸಾದುಮಾನ್ ತೆಕ್ಕಿಲ್ ಪೇರಡ್ಕ, ಸಲೀಂ ಪೇರಂಗೋಡಿ, ಉನೈಸ್ ಪೆರಾಜೆ, ಅಶ್ರಫ್
ಕಲ್ಲುಮುಟ್ಲು ಇವರನ್ನು ಆರಿಸಲಾಯಿತು. ಹಾಗೂ ಪ್ರಚಾರ ಸಮಿತಿಗೆ ಗಂಗಾದರ್ ಕಲ್ಲಪಳ್ಳಿ, ಶರೀಪ್ ಜಟ್ಟಿಪಳ್ಳ, ರಶೀದ್
ಜಟ್ಟಿಪಳ್ಳ, ಹಸೈನಾರ್ ಜಯನಗರ ಇವರುಗಳು ಆಯ್ಕೆ ಮಾಡಲಾಯಿತು.
- Saturday
- November 23rd, 2024