CAMPCO Recruitment: ಎ .21 ರಂದು ನಡೆದ ಕ್ಯಾಂಪ್ಕೋ ಜೂನಿಯರ್ ಅಸಿಸ್ಟಂಟ್ (A/M) ಹುದ್ದೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ ರಕ್ಷಾ ಜೆ.ಡಿ, ವಿಶಾಲ್.ಎಸ್ ಮತ್ತು ಅನುಶ್ರೀ ಎ.ಎನ್ ರವರು ಉತ್ತೀರ್ಣಗೊಂಡಿರುತ್ತಾರೆ. ಇವರು ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಯನ್ನು ಆನ್ಲೈನ್ ಮೂಲಕ ಪಡೆದಿರುತ್ತಾರೆ.
ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010 ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ, ಸಹಕಾರ ಕ್ಷೇತ್ರ, ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿಯಲ್ಲಿ ಬರುವ ಅನೇಕ ಹುದ್ದೆಗಳನ್ನು ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಲಂಕರಿಸಿದ್ದಾರೆ. ಅಲ್ಲದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ PGCET (MBA/MCA) ಪ್ರವೇಶ ಪರೀಕ್ಷೆಯಲ್ಲೂ ಈ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಅನ್ನು ಪಡೆದಿರುತ್ತಾರೆ.
ಪ್ರತಿ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರನ್ನು ಉದ್ಯೋಗದತ್ತ ಕೊಂಡೊಯ್ಯುವುದೇ ಈ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದ್ದು ಸರಕಾರಿ ಹಾಗು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ನಿರಂತರವಾಗಿ ಪ್ರತಿ ಉದ್ಯೋಗಾಕಾಂಕ್ಷಿಗಳಿಗೂ ಮೆಸೇಜುಗಳ ಮೂಲಕ ತಲುಪಿಸುವುದು ಈ ಶಿಕ್ಷಣ ಸಂಸ್ಥೆಯ ವೈಶಿಷ್ಟ್ಯತೆ .
ಪ್ರತಿದಿನದ ಹಾಗು ವಾರಾಂತ್ಯದ ಬ್ಯಾಚುಗಳು ಲಭ್ಯವಿದ್ದು (ಆನ್ಲೈನ್/ ನೇರ). ಆಸಕ್ತರು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ದೂರವಾಣಿ ಸಂಖ್ಯೆ 9945988118 / 9632320477 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ನೀಡಿದೆ.
- Thursday
- November 21st, 2024