Ad Widget

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 (EPL2024) ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ


ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ V-8 ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ (EPL) ಕ್ರಿಕೆಟ್ ಪಂದ್ಯಾಟ ,ಮೇ. 10 ರಂದು ಕೆ.ವಿ.ಜಿ. ಆಟದ ಮೈದಾನದಲ್ಲಿ ನಡೆಯಿತು. ವಿನುಪ್ ಮಲ್ಲಾರ, ನಿರ್ದೇಶಕರು TAPCMS ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಕ್ರಿಕೆಟ್ ಅಂದರೆ ಅದು ಕೇವಲ ಒಂದು ಆಟವಲ್ಲ, ಇದು ನಮಗೆ ತಾಳ್ಮೆ, ಸಂಘಟನೆ ಮತ್ತು ನಿರಂತರತೆಯ ಮಹತ್ವವನ್ನು ಕಲಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಕಾಲೇಜಿನಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಗೂ ಕಂಪ್ಯೂಟರ್ ಸೈನ್ಸ್ &ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ.ರವರು ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ

. . . . . . . . .

ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಕಿವಿ ಮಾತು ಹೇಳಿ ಶುಭ ಹಾರೈಸಿದರು. ಈ ಕ್ರೀಡಾ ಕೂಟದಲ್ಲಿ ಕಾಲೇಜಿನ 26 ತಂಡಗಳು ಭಾಗವಹಿಸಿದ್ದವು. ಹಾಗೂ ವಿದ್ಯಾರ್ಥಿಗಳ 2  flasgmob dance ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು ಜೊತೆಗೆ ಸಿಡಿಮದ್ದು ಪ್ರದರ್ಶನ ನೆರೆದ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದವು. ನಂತರ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು team redwings ಹಾಗೂ ದ್ವಿತೀಯ ಸ್ಥಾನವನ್ನು team mechien-26 ತಂಡವುಪಡೆದುಕೊಂಡಿತು. ಈ ಕ್ರೀಡಾ ಕೂಟದಲ್ಲಿ ಹಳೆವಿದ್ಯಾರ್ಥಿಗಳ ಒಂದು ತಂಡವು ಭಾಗವಹಿಸಿ ಪ್ರದರ್ಶನ ಪಂದ್ಯವನ್ನು ಆಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ಮಾತನಾಡಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿ ಎಲ್ಲರು ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಿ ಹೊನಲು ಬೆಳಕಿನ ಆಟವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ ಎ., ಕಾಲೇಜಿನ ಆಡಳಿತಾಧಿಕಾರಿ ಶ್ರೀ ನಾಗೇಶ್ ಕೊಚ್ಚಿ, ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್, ಟ್ಟ್ರೈನಿಂಗ್ & ಪ್ಲೇಸ್‌ಮೆ0ಟ್ ಆಫೀಸರ್ ಪ್ರಶಾಂತ್ ಕಕ್ಕಾಜೆ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಪ್ರೊ. ಲೋಕೇಶ್ ಪಿ.ಸಿ, ಕ್ರೀಡಾ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಭಾಸ್ಕರ್ ಎಸ್.ಬಿ. ಹಾಗೂ ಶ್ರೀ ತೀರ್ಥವರ್ಣ, ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರುಗಳು ಪಂದ್ಯಾಕೂಟದ ಯಶಸ್ಸಿಗೆ ಸಂಪೂರ್ಣ ಸಹಕರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading