
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಬ ತಾಲೂಕಿನ ಎಡಮಂಗಲ ಸರಕಾರಿ ಪ್ರೌಢಶಾಲೆಯಿಂದ ಪರೀಕ್ಷೆಗೆ ಹಾಜರಾದ 9 ಹುಡುಗಿಯರು ಮತ್ತು 2 ಹುಡುಗರಲ್ಲಿ ಎಲ್ಲಾ 11 ಮಂದಿಯೂ ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ. ಎಡಮಂಗಲದ ಕೇಶವನ್ ಮತ್ತು ಸಿಂಧು ದಂಪತಿಯ ಪುತ್ರಿ ಅಮೃತ ಕೇಶವನ್ 558 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಮತ್ತು ಎಡಮಂಗಲದ ಶೇಖರ ಮತ್ತು ಕುಸುಮಾ ದಂಪತಿಯ ಪುತ್ರಿ ಅಂಕಿತ 543 ‘ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.