
ಚಾಲಕನ ನಿಯಂತ್ರಣ ತಪ್ಪಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಅಂಗಡಿ ಕಟ್ಟಡಕ್ಕೆ ಮಡಿಕೇರಿ ಕಡೆಯಿಂದ ಬಂದ ಬೊಲೆರೊ ಜೀಪ್ ವೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಆರಂಬೂರಿನಲ್ಲಿ ನಡೆದಿದೆ.
ಡಿಕ್ಕಿ ರಭಸಕ್ಕೆ ಜೀಪ್ ಜಖಂಗೊಂಡಿದೆ. ಬೊಲೆರೋ ಕಾರಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಕಲಂದರ್ ಪೆರಾಜೆ ಎಂಬುವವರ ಮ್ಹಾಲಕತ್ವದ ನಿರ್ಮಾಣ ಹಂತದಲ್ಲಿರುವ ಹೋಟೆಲ್ಗೆ ಬೊಲೆರೋ ಗುದ್ದಿರುವ ರಬಸಕ್ಕೆ ಕಟ್ಟಡ ಕುಸಿದಿದೆ ಎಂದು ತಿಳಿದುಬಂದಿದೆ.