- Friday
- November 1st, 2024
ಸಂಜೆ ಸುರಿದ ಗಾಳಿಗೆ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಬೆಟ್ಟ ಎಂಬಲ್ಲಿ ರಸ್ತೆಗೆ ಮರ ಬಿದ್ದು, ವಿದ್ಯುತ್ ಕಂಬ ಮುರಿದ ಘಟನೆ ವರದಿಯಾಗಿದೆ.
ಇಂದು ಸಂಜೆ ಸುರಿದ ಗಾಳಿ ಮಳೆಗೆ ನಡುಗಲ್ಲು ಆಸುಪಾಸು ಮರಕತ ಮತ್ತಿತರ ಕಡೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.
ಸುಳ್ಯ ತಾಲೂಕಿನಾದ್ಯಂತ ಇಂದು ಸಂಜೆ ಸುರಿದ ಮಳೆಗೆ ಇಳೆ ತಂಪಾಗಿದೆ. ಗುಡುಗು ಹಾಗೂ ಗಾಳಿ ಮಳೆಗೆ ವಿವಿಧೆಡೆ ಕೃಷಿ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. 33 ಕೆವಿ ಮಾಡಾವು - ಕಾವು - ಸುಳ್ಯ ವಿದ್ಯುತ್ ಲೈನ್ ಫಾಲ್ಟ್ ಆಗಿದ್ದು ಸುಳ್ಯದಾದ್ಯಂತ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲಸ ಮುಗಿಸಿ ಶೆಡ್ ನಲ್ಲಿ ಕುಳಿತಿದ್ದ ಕಾರ್ಮಿಕರಿಗೆ ಸಿಡಿಲು ಬಡಿದು ಓರ್ವ ಕಾರ್ಮಿಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಇಂದು ನಡೆದಿದೆ.ಕಾರ್ಮಿಕರು ಮರಳು ತೆಗೆಯುವ ಕೆಲಸ ಮಾಡುತ್ತಿದ್ದು, ನದಿ ಬದಿಯ ಶೆಡ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಶೆಡ್‌ಗೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ.ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಚೈನ್‌ಪುರ್ ಮೂಲದ...
ಚಾಲಕನ ನಿಯಂತ್ರಣ ತಪ್ಪಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಅಂಗಡಿ ಕಟ್ಟಡಕ್ಕೆ ಮಡಿಕೇರಿ ಕಡೆಯಿಂದ ಬಂದ ಬೊಲೆರೊ ಜೀಪ್ ವೊಂದು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಆರಂಬೂರಿನಲ್ಲಿ ನಡೆದಿದೆ. ಡಿಕ್ಕಿ ರಭಸಕ್ಕೆ ಜೀಪ್ ಜಖಂಗೊಂಡಿದೆ. ಬೊಲೆರೋ ಕಾರಿನಲ್ಲಿ ಇದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಕಲಂದರ್ ಪೆರಾಜೆ ಎಂಬುವವರ ಮ್ಹಾಲಕತ್ವದ ನಿರ್ಮಾಣ ಹಂತದಲ್ಲಿರುವ ಹೋಟೆಲ್ಗೆ ಬೊಲೆರೋ ಗುದ್ದಿರುವ...
ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ಪೆರಾಜೆ ಸಮೀಪದ ಪಾಲಡ್ಕದಲ್ಲಿ ಸಂಜೆ ಸಂಭವಿಸಿದೆ. ಮಡಿಕೇರಿಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರಿನ ಮಧ್ಯೆ ಪಾಲಡ್ಕದಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಗ್ರಾಫಿಕ್ ಡಿಸೈನಿಂಗ್ ಮತ್ತು ಕಂಟೆಂಟ್ ಮೇಕಿಂಗ್ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮ ಮೇ 09 ರಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು.ಯೂ ಟ್ಯೂಬರ್ ಹಾಗೂ ಪೋಸ್ಟರ್ ಡಿಸೈನರ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿ ಮುರಳಿ ಕೃಷ್ಣ ವೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು....
ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕನಕಮಜಲಿನ ನೆಡಿಲು ಸತೀಶ್ ಅವರು ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡು, ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕತ್ಸೆಗಾಗಿ ...
ಕೆಲವು ದಿನಗಳ ಹಿಂದೆ ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಕೆರೆಮೂಲೆ, ಬೂಡು ಪ್ರದೇಶಕ್ಕೆ ಬಂದು ಕೃಷಿಹಾನಿಗೊಳಿಸಿರುವುದಾಗಿ ವರಿದಿಯಾಗಿದೆ. ಕೆರೆಮೂಲೆ ಭಾಗದ ಈಶ್ವರಪ್ಪ ಗೌಡ ರ ತೋಟ ಸೇರಿದಂತೆ ಪಯಸ್ವಿನಿ ನದಿಗೆ ತಾಗಿಕೊಂಡಿರುವ ಕೃಷಿಕರ ತೋಟಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿಮಾಡಿವೆ. ಅಪಾರ ಪ್ರಮಾಣದಲ್ಲಿ ಬಾಳೆ, ಅಡಿಕೆ, ಕೊಕ್ಕೊಕೃಷಿ ಹಾನಿ ಮಾಡಿವೆ.