ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 620 ಅಂಕ ಪಡೆದ ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಣಮ್ಯ ಎನ್. ಆಳ್ವ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ, ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದಿದ್ದಾರೆ. ಈಕೆ ಬಂದಡ್ಕಡ ನಿಶಾಂತ್ ಆಳ್ವ ಹಾಗೂ ಸುಪರ್ಣ ಆಳ್ವ ದಂಪತಿಗಳ ಪುತ್ರಿ.
619 ಅಂಕ ಪಡೆದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವರ್ಷ ಬೇಕಲ್ ಹಾಗೂ ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯ ಆಯುಷ್ ರಾವ್ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವರ್ಷ ಬೇಕಲ್ ಸುಬ್ರಹ್ಮಣ್ಯದ ದೇವರಗದ್ದೆ ನಿವಾಸಿ ಜಗನ್ನಾಥ ಮತ್ತು ಅಂಬಿಕಾ ದಂಪತಿಗಳ ಪುತ್ರಿ. ಆಯುಷ್ ರಾವ್ ಸುಳ್ಯದ ಕೆಳಗಿನ ನಾವೂರು ನಿವಾಸಿ ಸಿವಿಲ್ ಇಂಜಿನಿಯರ್ ಕೆ.ಪಿ. ಕೃಷ್ಣ ರಾವ್ ಹಾಗೂ ಆಶಾ ರಾವ್ ದಂಪತಿಗಳ ಪುತ್ರ
617 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನವನ್ನು ಗುತ್ತಿಗಾರಿನ ಸ.ಪ.ಪೂ.ಕಾಲೇಜಿನ ನಮಿತಾ ಮರಿಯಾ ಕ್ಯಾಸ್ಟಲಿನೊ ಹಾಗೂ ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿತ ಗೋಳ್ಯಾಡಿ ಪಡೆದುಕೊಂಡಿದ್ದಾರೆ. ನಮಿತಾ ಮರಿಯಾ ಕ್ಯಾಸ್ಟಲಿನೊ ಗುತ್ತಿಗಾರು ಸ.ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ನೆಲ್ಸನ್ ಕ್ಯಾಸ್ಟಲಿನೊ ಮತ್ತು ಸುಳ್ಯದ ಸೀನಿಯರ್ ಸಿವಿಲ್ ಕೋರ್ಟ್ ನ ದ್ಚಿತೀಯ ದರ್ಜೆ ಸಹಾಯಕಿ ಮೆಟಿಲ್ಡಾ ಡಿ ಸೋಜ ಅವರ ಪುತ್ರಿ. ಹಿತ ಗೋಳ್ಯಾಡಿ ಮಡಪ್ಪಾಡಿ ಗ್ರಾಮದ ಗೋಳ್ಯಾಡಿ ದಿನೇಶ್ ರವರ ಪುತ್ರಿ.