ಸುಳ್ಯದ ಏರ್ಟೆಲ್ ಕಛೇರಿಯಲ್ಲಿ ಅಪ್ರಾಪ್ತೆ ಬಾಲಕಿಯ ಚಿತ್ರ ಸೆರೆ ಹಿಡಿದ ಪ್ರಕರಣಕ್ಕೆ ವಿಶ್ವ ಹಿಂದು ಪರಿಷದ್ ಭಜರಂಗದಳವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಈ ಘಟನೆ ಒಂದು ಬೆಳಕಿಗೆ ಬಂದಿದ್ದು ಇಂತಹ ಹಲವು ಘಟನೆಗಳು ಹಲವು ನಡೆದಿರಬಹುದು. ಅಲ್ಲದೇ ಒಂದು ಕಛೇರಿಯಲ್ಲಿ ಸಿಸಿ ಕ್ಯಾಮರ ಇಲ್ಲದೇ ಇರುವುದು ಕಂಡಾಗ ಪೋಲಿಸ್ ಇಲಾಖೆಯು ಬೇರೆ ಎಲ್ಲಾ ಅಂಗಡಿಗಳಲ್ಲಿ ಸಿಸಿ ಅಳವಡಿಸಲು ಹೇಳುವಾಗ ಮೊಬೈಲ್ ಅಂಗಡಿಗಳಲ್ಲಿ ಯಾಕೆ ಇಲ್ಲಾ ಎಂದು ಪ್ರಶ್ನಿಸಿದರು . ಅಲ್ಲದೇ ಮುಂದಿನ ದಿನಗಳಲ್ಲಿ ಸಮಾಜವು ಉಗ್ರ ರೀತಿಯಲ್ಲಿ ಹೋರಾಟ ನಡೆಸುತ್ತೇವೆ. ಪೋಲಿಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷದ್ ಅಧ್ಯಕ್ಷರಾದ ಸೋಮಶೇಖರ್ ಪೈಕ ಆಗ್ರಹಿಸಿದರು.
ಭಜರಂಗದಳ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ ಮಾತನಾಡಿ ಪೋಲಿಸ್ ಠಾಣೆಗೆ ಸಂತ್ರಸ್ತ ಅಪ್ರಾಪ್ತೆ ಮತ್ತು ಪೋಷಕರ ಜೊತೆಗೆ ಹೋದಾಗ ಅಲ್ಲಿ ಪೋಲಿಸ್ ಅಧಿಕಾರಿಗಳು ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವವರು ಇದೆಲ್ಲಾ ಬೇಕಾ ಎಂದು ಹೇಳಿದ್ದು ಸರಿಯಲ್ಲ ನಾವು ಇಂತಹ ರಾಜಿ ಪಂಚಾಯತಿ ಮಾಡಲು ಠಾಣೆಗೆ ಬರಬೇಕಾ ನಮ್ಮ ಮುಖಂಡರು ಇಲ್ಲವೇ ಎಂದು ಹೇಳಿದರು .
ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟದ ಎಚ್ಚರಿಕೆ
ಈಗಾಗಲೇ ನಾವು ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನು ಠಾಣೆಗೆ ಕರೆತಂದು ನಿನ್ನೆ ಕೂರಿಸಲಾಗಿದೆ, ಅವರಿಗೆ ರಾಜ ಮರ್ಯಾದೆ ನೀಡುತ್ತಿದ್ದಾರೆ, ಇದು ಯಾವ ರೀತಿಯ ಕಾನೂನು ಎಂದು ಪ್ರಶ್ನಿಸಿದರು. ಇಂದು ಮಧ್ಯಾಹ್ನ 2 ಗಂಟೆಯ ಒಳಗಾಗಿ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ಠಾಣೆಯ ಮುಂದೆ ಪ್ರತಿಭಟನೆ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹರಿಪ್ರಸಾದ್ ಎಲಿಮಲೆ , ಮನೋಜ್ ಕುಮಾರ್ , ರೂಪೇಶ್ ಪೂಜಾರಿ ಮನೆ , ದೀಕ್ಷಿತ್ ಕಾನತ್ತಿಲ , ಲೋಹಿತ್ ಹೊದ್ದೆಟ್ಟಿ ಉಪಸ್ಥಿತರಿದ್ದರು.