
ಸುಳ್ಯದ ಗಾಂಧಿ ನಗರದಲ್ಲಿರುವ ಏರ್ ಟೆಲ್ ರಿಚಾರ್ಜ್ ಕಚೇರಿಗೆ ರಿಚಾರ್ಜ್ ನಿಮಿತ್ತ ಆಗಮಿಸಿದ ಹಿಂದೂ ಹುಡುಗಿಯನ್ನು ಕುಳಿತುಕೊಳ್ಳಲು ಹೇಳಿ ಆಕೆಯ ಗಮನಕ್ಕೆ ಬಾರದೇ ಫೋಟೋ ಕ್ಲಿಕ್ಕಿಸಿದ ಅನ್ಯ ಕೋಮಿನ ಯುವಕನ ಕೃತ್ಯವನ್ನು ಸುಳ್ಯ ಬಿಜೆಪಿ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಇದು ಲವ್ ಜಿಹಾದ್ ಕೃತ್ಯದ ಒಂದು ಭಾಗ ಕೃತ್ಯ ಗಮನಕ್ಕೆ ಬಂದ ತಕ್ಷಣ ಯುವತಿ ಪ್ರತಿಭಟಿಸಿ ಫೋಟೋ ವನ್ನು ಡಿಲೀಟ್ ಮಾಡಿಸಿ ದೂರು ನೀಡಿದ್ದು ಯುವತಿಯ ಈ ರೀತಿಯ ಸಮಯ ಪ್ರಜ್ಞೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹಿಂದೂ ಯುವತಿಯರು ಇಂಥ ವಿಷಯಗಳ ಬಗ್ಗೆ ಬಹಳಷ್ಟು ಎಚ್ಚರಿಕೆಯಿಂದ ಇದ್ದು ಇಂಥ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಕುಲ0ಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕೆಂದು ಎಂದು ಸುಳ್ಯ ಮಂಡಲದ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ. ಕೆ ಎಂದು ಖಂಡನೆ ವ್ಯಕ್ತಪಡಿಸಿದರು.