ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಂಟೆಸರಿ ಶಿಕ್ಷಕಿ ತರಬೇತಿಯ ೫ ವಿದ್ಯಾರ್ಥಿನಿಯರು ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ. ಮಾಡಾವು ನಿವಾಸಿಯಾದ ಶ್ರೀ ವಿಶ್ವನಾಥ ಮೊಗೇರ ಹಾಗೂ ಬೇಬಿ ದಂಪತಿಗಳ ಪುತ್ರಿಯಾದ ಶ್ರಾವ್ಯ ಇವರು ಮತ್ತು ಪುತ್ತೂರಿನ ದರ್ಬೆ ನಿವಾಸಿಯಾದ ಬಿ. ಜಗದೀಶ್ ಆಚಾರ್ಯ ಮತ್ತು ಶ್ರೀಮತಿ ಸರಿತಾ ದಂಪತಿಗಳ ಪುತ್ರಿಯಾದ ನಿಹಾರಿಕ ಇವರು ಶ್ರೀ ರಾಮಕೃಷ್ಣ ಸೇವಾ ಸಮಾಜ(ರಿ) ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ. ಪುತ್ತೂರಿನ ಮರೀಲ್ ನಿವಾಸಿಯಾದ ಕಲಂದರ್ ಶಾ ಇವರ ಪತ್ನಿಯಾದ ನಬೀಲಾ ಇವರು ಇ.ಎಸ್.ಎಸ್.ಆರ್. ಆಂಗ್ಲಮಾಧ್ಯಮ ಶಾಲೆ, ಮರೀಲ್ ಪುತ್ತೂರು ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಮೊಟ್ಟೆತ್ತಡ್ಕ ನಿವಾಸಿಯಾದ ನೂರುಲ್‌ಖಾನ್ ಮತ್ತು ನೆಬೀಸಾ ದಂಪತಿಗಳ ಪುತ್ರಿಯಾದ ಇರ್ಷಾನ ಇವರು ಮಧುರಾ ಇಂಟರ್‌ನ್ಯಾಷನಲ್ ಸ್ಕೂಲ್ ಮೇನಾಲ ಈಶ್ವರಮಂಗಲ ಪುತ್ತೂರು ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಪುತ್ತೂರಿನ ಬೊಳ್ವಾರ್ ನಿವಾಸಿಯಾದ ಮಹಮ್ಮದ್ ಇರ್ಫನ್ ಇವರ ಪತ್ನಿಯಾದ ಅಝ್ವಿನ ಇವರು ನೌವರುತುಲ್ ಮದೀನ ಆಂಗ್ಲ ಮಾಧ್ಯಮ ಶಾಲೆ ಮಿತ್ತೂರು ಇಲ್ಲಿ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಇವರೆಲ್ಲರಿಗೆ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್‌ನಾಥ್ ಹಾಗೂ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಇವರು ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.
೨೦೨೪-೨೫ ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊಂಡಿರುತ್ತದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಕೆ. ಹೇಮಲತಾ ಗೋಕುಲ್‌ನಾಥ್ ಇವರು ಪ್ರಕಟಿಸಿರುತ್ತಾರೆ.
- Saturday
- November 23rd, 2024