
ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿದ ಘಟನೆ ಸಂಪಾಜೆ – ಕಲ್ಲುಗುಂಡಿ ಸೇರಿದಂತೆ ವಿವಿಧೆಡೆಗಳಲ್ಲಿ ಹಾನಿ ಸಂಭವಿಸಿದೆ.
ಚಟ್ಟೆಕಲ್ಲು ಎಂಬಲ್ಲಿ ಹಸೈನಾರ್ ಎಂಬವರ ರಬ್ಬರ್ ಶೀಟ್ ಶೇಖರಣಾ ಘಟಕಕ್ಕೆ ಮರಬಿದ್ದು, ಹಾನಿಯಾಗಿದೆ.
ದಂಡಕಜೆ ಹಾಗೂ ಚಟ್ಟೆಕಲ್ಲು ಬಳಿ ಮಳೆ ನೀರು ರಸ್ತೆಗೆ ಹರಿದು ಹೂಳು ತುಂಬಿಕೊಂಡ ಘಟನೆಯೂ ನಡೆದಿದೆ. ಅಲ್ಲದೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.