ಮಂಡೆಕೋಲು: ಮಂಡೆಕೋಲು ಗ್ರಾಮದ ಆರಾಧ್ಯ ದೇವ ಮಹಾವಿಷ್ಣು ಮೂರ್ತಿ ದೇವರ ಪುನಃ ಪ್ರತಿಷ್ಠ ಅಷ್ಟಭಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.29 ರಂದು ರಾತ್ರಿ ಸ್ಥಳೀಯ ಪುಟಾಣಿ ಮಕ್ಕಳ ಯಕ್ಷಗಾನವು ನಡೆಯಿತು. ಈ ಕಾರ್ಯಕ್ರಮಕ್ಕೆ ಊರ ಪರ ಊರ ಯಕ್ಷ ಪ್ರೇಮಿಗಳು ಭಾಗವಹಿಸಿ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅಭಿನಂದಿಸಿದರು.
ಯಕ್ಷಗಾನ ತರಬೇತಿಯ ಕುರಿತ ಮಾಹಿತಿ.
ಈ ಹಿಂದೆ ಮಂಡೆಕೋಲು ಗ್ರಾಮವನ್ನು ಕುಗ್ರಾಮ ಎಂದು ಬಿಂಬಿಸುತ್ತಿದ್ದರೆ ಇಂದು ಮಂಡೆಕೋಲು ಬೃಹದಾಕಾರವಾಗಿ ಸಾಂಸ್ಕೃತಿಕ , ಆರ್ಥಿಕ, ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿದ್ದು ಇದೇ ಗ್ರಾಮದಲ್ಲಿ ಗ್ರಾಂಥ ಪಾಲಕಿಯ ನೇತೃತ್ವದಲ್ಲಿ ದಿನಾಂಕ 13.08.2023ರಂದು ಗ್ರಾಮ ಪಂಚಾಯತ್ ಗ್ರಂಥಾಲಯದ ವತಿಯಿಂದ
ನಡೆಯುವ ಯಕ್ಷಗಾನ ತರಭೇತಿ ಯಾದವ ಸಭಾ ಸಭಾಂಗಣದಲ್ಲಿ ಪ್ರಾರಂಭ ಆಗಿದ್ದು ಕಾರಾಣಾಂತರ ದಿಂದ ಮಂಡೆಕೋಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿದೆ ಪ್ರಾರಂಭದಲ್ಲಿ ಮಂಗಳ ಕಲಾವೇದಿಕೆಯ ಪ್ರಧಾನ ಭಾಗವತರು ಯಕ್ಷನಿದಿ ಬಿರುದಾಂಕಿತ ಯೋಗೀಶ್ ಶರ್ಮಾ, ಗಂಗಾಧರ ಮಾವಂಜಿ , ಸುರೇಶ್ ಕಣೆಮರಡ್ಕ ಯದುಗಿರಿ ರಾಮಚಂದ್ರ ಪ್ರಕಾಶ್ ಕಣೆಮರಡ್ಕ ಇವರ ಮತ್ತು ಪೋಷಕರ ಸಮ್ಮುಖದಲ್ಲಿ ಉದ್ಘಾಟನೆ ಗೊಂಡಿತು ಗ್ರಾಮದ ಎಲ್ಲರ ಪ್ರೋತ್ಸಾಹ ಪ್ರತಿಕ್ರಿಯೆ ಸಿಕ್ಕಿದ್ದು ಇನ್ನಷ್ಟು ಜನ ಯಕ್ಷಗಾನ ಕ್ಲಾಸ್ಗೆ ಮಾಡೋದಾದರರೆ ನಮ್ಮ ಮಕ್ಕಳನ್ನು ಕಳುಹಿಸುತ್ತೇವೇಂತ ತಿಳಿಸಿರುತ್ತಾರೆ ಯಕ್ಷಗಾನ ಕಾರ್ಯಕ್ರಮ ವೇದಿಕೆಯಲ್ಲಿ ನಡೆಯುವಾಗ ಒಂದಷ್ಟು ಖರ್ಚು ಗಳ ಅಗತ್ಯತೆ ಇದೆ ಎಂದಾಗ ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರು ಹಣಸಹಾಯ ನೀಡಿದ್ದು ಕಾರ್ಯಕ್ರಮದ ವೀಕ್ಷಣೆಗೆ ಕಿಕ್ಕಿರಿದು ಜನಸಂದಣಿಯಿದ್ದು ಊರಪರವೂರಿನ ಜನರ ಮೆಚ್ಚುಗೆಗೆ ಪಾತ್ರವಾಯಿತು,, ಬೆನ್ನೆಲುಬಾಗಿ ನಿಂತ ಎಲ್ಲಾ ಕಿರಿಯ ಮತ್ತ ಹಿರಿಯ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೂ ಅವಕಾಶ ಕಲ್ಪಿಸಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ ಗಳು , ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಅವಕಾಶ ಕಲ್ಪಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದರು , ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ನಡೆದ ಪ್ರಸಂಗದಲ್ಲಿ ಪಾತ್ರ ವರ್ಗದಲ್ಲಿ
ಏಕಾದಶಿ ದೇವಿ ಮಹಾತ್ಮೆ
ದೇವೇಂದ್ರ -ಭಾಗ 1.ಯಜ್ಜೇಶ್ ಪಾರ್ಟ್ 2ಪ್ರಣೀತ್ ತೋಟಪ್ಪಾಡಿ, ಅಗ್ನಿ -ಲಿಖಿನ್ ಕುಮಾರ್ ಯು.ಎಂ,
ವರುಣ -ಸಿಂಚನ ಎಂ.ಜೆ, ವಾಯು-ಧನುಷ್ ಕೆ.ಬಿ,
ಕುಭೇರ-ವೃಶಾಲಿ ಕೆ.ಎಸ್ ,ನಿರುತಿ-ಆದಿರಾ ಕೆ.ಎಸ್
ಆಶಿಕ್ -ಯಮ, ದೇವೇಂದ್ರನ ಮಗ ಜಯಂತ – ಭವನ್ , ನಾಡಿಜಂಘ-ಶ್ರೇಯಸ್ ಎಸ್ ಎಂ,
ಗುಜ್ಝರಾಸುರ-ಋಷಿಕ್ ಎಂ.ಆರ್, ವಜ್ರದಂತ-ಸುದೀಶ್ ಕೆ.ಆರ್, ಮಾರಕಾಸುರ-ಭವಿಷ್
ಧೀರಕಾಸುರ-ಪ್ರಣೇಶ್ ಕೆ.ಪಿ, ಕರಂಕಾಸುರ-ಪ್ರಜ್ವಲ್
ಶುಂಡಾಸುರ-ಪವನ್ ಕೃಷ್ಣ ಕಣೆಮರಡ್ಕ, ಋತ್ವಿಕ್ -ಪ್ರಲಂಭಾಸುರ, ದಂಡಕಾಸುರ-ತನಿಷ್ಕ್ ಎಂ.ಪಿ. ಪ್ರಚಂಡಾಸುರ- ಪ್ರಖ್ಯಾತ್,ಮಾವಂಜಿ ಶಂಭರಾಸುರ- ಸಾತ್ವಿಕ್ ಯು.ಎಂ ಧೇನುಕಾಸುರ-ಉಜ್ವಲ್ ಶಾಲಾ ಬಳಿ, ದೇವೇಂದ್ರನ ದೂತ-ಸೂರ್ಯತೇಜ, ಮೇಘಮುಖಿ-ತನುಶ್ರೀ ಯು.ಎಂ, ದೂತ-ಪ್ರಖ್ಯಾತ್ ತೋಟಪ್ಪಾಡಿ
ವಿಷ್ಣು -ಶ್ರದ್ಧಾ ಕಣೆಮರಡ್ಕ ,ಗರುಡ-ಮನ್ವಿತ್ ಕೆ.ಎಸ್, ಮುರಾಸುರ-ತಶ್ವಿತ್ ಕೆ, ಈಶ್ವರ-ಭರತ್ ಕೆ.ಬಿ, ದೇವಿ-ವಂಶಿಕ್
ನಟಿಸಿದ್ದಾರೆ. ಮಂಡೆಕೋಲು ಗ್ರಾಮವನ್ನು ಮಾದರಿಯಾಗಿ ಇರಿಸಿಕೊಂಡು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಗ್ರಂಥಾಲಯಗಳು ಪಂಚಾಯತ್ ಸೇರಿದಂತೆ ಊರವರ ಸಹಕಾರದಿಂದ ಇನ್ನಷ್ಟು ಪ್ರತಿಭೆಗಳನ್ನು ಬೆಳೆಸುವ ಕಾರ್ಯಗಳು ಆಗಲಿ ಎನ್ನುವುದು ನಮ್ಮ ಹಾರೈಕೆ