Ad Widget

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದಲ್ಲಿ ಸುಮಾರು 24 ವರ್ಷಗಳ ಕಾಲ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಜಯಂತ್ ಶೆಟ್ಟಿ ಇವರು ಜೂ.27ರಂದು ನಿಧನ ಹೊಂದಿದರು. ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಜೂ.28ರಂದು ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್‍ನಲ್ಲಿ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ್...

ನಿವೃತ್ತ ಶಿಕ್ಷಕ ದಿ.ಗಣಪತಿ ಗೌಡರ ವೈಕುಂಠ ಸಮಾರಾಧನೆ

ಕೊಲ್ಲಮೊಗ್ರ ಗ್ರಾಮದ ನಿವೃತ್ತ ಶಿಕ್ಷಕ ದಿ.ಗಣಪತಿ ಗೌಡ ಚಾಂತಾಳ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಜೂ.27 ರಂದು ನಡೆಯಿತು. ನಿವೃತ್ತ ಪಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ, ಪಾನತ್ತಿಲ ನಾರಾಯಣ ಗೌಡ ನುಡಿ ನಮನ ಸಲ್ಲಿಸಿದರು. ದಿ.ಗಣಪತಿ ಗೌಡರ ಧರ್ಮಪತ್ನಿ ನಿವೃತ್ತ ಮುಖ್ಯಶಿಕ್ಷಕಿ ಬೊಳಿಯಮ್ಮ, ಪುತ್ರರಾದ ಸಚಿನ್ ಚಾಂತಾಳ, ಡಾ. ಸವಿನ್ ಚಾಂತಾಳ ಹಾಗೂ ಮನೆಯವರು, ಕುಟುಂಬಸ್ಥರು...
Ad Widget

ಗುತ್ತಿಗಾರು : ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಜನ ಜಾಗೃತಿ ವೇದಿಕೆ ಗುತ್ತಿಗಾರು ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮವನ್ನು ಕಾಲೇಜ್ ನ ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮರವರ...

ಸಂಪಾಜೆ ಸೊಸೈಟಿಗೆ ಕೃಷಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಭೇಟಿ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಶಿವಶಂಕರ ಯು.ಬಿ. ರವರು ಭೇಟಿ ನೀಡಿ ಸಂಘದ ಪ್ರಗತಿ ಪರಿಶೀಲನೆ ನಡೆಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಪರವಾಗಿ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸುಳ್ಯ ಕೃಷಿ ಇಲಾಖೆಯ...

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ , ಉದ್ಯಮಿ ಜಯಂತ್ ಶೆಟ್ಟಿ ನಿಧನ

ಸುಳ್ಯದ ಹಳೆಗೇಟು ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ಮಾಲಕ ಜಯಂತ್ ಶೆಟ್ಟಿ ಕೇರ್ಪಳ ಅಲ್ಪಕಾಲದ ಅಸೌಖ್ಯದ ಇಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಸುಳ್ಯದ ಗೃಹರಕ್ಷಕದಳದ ಘಟಕಾಧಿಕಾರಿಯಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ ಕಮಲಾಕ್ಷಿ ವಿ ಶೆಟ್ಟಿ, ಪತ್ನಿ ನಮಿತ, ಪುತ್ರಿಯರಾದ ನೇಹಾ ಹಾಗೂ ರಿಯಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಚಿನ್ನಪ್ಪ ಮಾಸ್ತರ್ ಪೈಕ ಬೊಮ್ಮದೇರೆ ನಿಧನ

ಗುತ್ತಿಗಾರು ಗ್ರಾಮದ ನಿವೃತ್ತ ಶಿಕ್ಷಕ ಚಿನ್ನಪ್ಪ ಗೌಡ ಪೈಕ ಬೊಮ್ಮದೇರೆ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಜಯಪ್ರಕಾಶ್, ನವೀನ್, ಕಿರಣ್ ಮತ್ತು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಕವನ : ಕಷ್ಟ, ಸೋಲುಗಳ ಆಚೆಗೆ ಸುಂದರವಾದ ಬದುಕಿದೆ…

ಜೀವನದಲ್ಲಿ ಏಕಾಂಗಿಯಾದೆ ಎಂದು ನೀ ಕೊರಗಬೇಡ, ಏಕಾಂತದಲ್ಲೂ ಖುಷಿಯಿದೆ ಎಂಬುವುದನ್ನು ಮರೆಯಬೇಡ...ಬದುಕಿನಲ್ಲಿ ಕಷ್ಟವೇ ಬರುವುದು ಎಂದು ನೀ ಕುಗ್ಗಬೇಡ, ಕಷ್ಟ-ನಷ್ಟಗಳ ಆಚೆಗೆ ಸುಂದರವಾದ ಬದುಕಿದೆ ಎಂಬುವುದನ್ನು ಮರೆಯಬೇಡ... ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಮುಖದಲ್ಲಿನ ನಗುವನ್ನು ಎಂದಿಗೂ ಬಿಡಬೇಡ, ಕೆಲವು ಕಷ್ಟಗಳ ಅತ್ತು ಮರೆತರೆ ಇನ್ನೂ ಕೆಲವು ಕಷ್ಟಗಳ ನಕ್ಕು ಮರೆಯಬಹುದೆಂಬ ಮಾತನ್ನು ಮರೆಯಬೇಡ... ಜಗತ್ತಿನಲ್ಲಿ ನಿನಗೊಬ್ಬನಿಗೆ...

ಯಕ್ಷಗಾನ ಕಲಾವಿದ ಸಬ್ಬಣಕೋಡಿ ಕೃಷ್ಣ ಭಟ್ ನಿಧನ

ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಸಬ್ಬಣಕೋಡಿ ಕೃಷ್ಣ ಭಟ್(60) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನೆಗೆ ಹೋಗದೇ ತಿರುಗಾಡುತ್ತಿದ್ದ ಅವರು ಸುಳ್ಯ ಬಸ್‌ ನಿಲ್ದಾಣದ ಸಮೀಪದ ಕಟ್ಟಡವೊಂದರ ಎದುರು ಭಾನುವಾರ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದರು.ಬಳಿಕ ಕಟ್ಟಡದ ಮಾಲಕರು ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿಯವರಿಗೆ ಮಾಹಿತಿ ನೀಡಿ, ಅವರು ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರು....

ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಹಾಜಿ ಅಬ್ದುಲ್ ಹಮೀದ್ ಎಸ್.ಎಂ. ನೇಮಕ

ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆ ಸಂಚಾಲಕರಾಗಿ ಅನಿವಾಸಿ ಉದ್ಯಮಿ, ಶಿಕ್ಷಣ ಪ್ರೇಮಿ, ಹಾಜಿ ಅಬ್ದುಲ್ ಹಮೀದ್ ಎಸ್. ಎಂ. ರವರನ್ನು ಇತ್ತೀಚೆಗೆ ನಡೆದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಅಡಳಿತ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಯಿತು.ಇವರು ಸುಳ್ಯ ಮತ್ತು ಸೌದಿ ಅರೇಬಿಯಾ ಉದ್ಯಮಿಯಾಗಿದ್ದಾರೆ.ಡಿಕೆಸಿಸಿ ಇದರ ಅಧ್ಯಕ್ಷರಾಗಿ ,ಅನ್ಸಾರಿಯದಲ್ಲಿ...

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು

ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು ಅವರು ಆಯ್ಕೆಯಾಗಿದ್ದಾರೆ. ಕೆವಿಜಿ ಸುಳ್ಯ ಸಮಾಜ‌ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕ ನಡೆಯಿತು. ಗೌರವಾಧ್ಯಕ್ಷರಾಗಿ ಡಾ.ಚಿದಾನಂದ‌ ಕೆ.ವಿ,ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಅಂಬೆಕಲ್ಲು,ಕೋಶಾಧಿಕಾರಿಯಾಗಿ ಜನಾರ್ಧನ್ ನಾಯ್ಕ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ಡಾ. ಜ್ಞಾನೇಶ್ ಎನ್....
Loading posts...

All posts loaded

No more posts

error: Content is protected !!